ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಕಳೆದ ಮೂರು ದಿನಗಳಿಂದ ನರೇಗಲ್ಲದಲ್ಲಿ ಜರುಗಿದ ಉರುಸು ಕಾರ್ಯಕ್ರಮವು ಅದ್ಧೂರಿಯಾಗಿ ಸಂಪನ್ನಗೊಂಡಿತು. ಈ ನಿಮಿತ್ತ ಜರುಗಿದ ಮಂಜೂರ ಹುಸೇನ್‌ಶಾವಲಿಯವರ ಮೆರವಣಿಗೆಯು ಭಕ್ತರೆಲ್ಲರ ಮನ ಸೂರೆಗೊಂಡಿತು.
Advertisement
ದರ್ಗಾದಿಂದ ಪ್ರಾರಂಭವಾದ ಉರುಸಿನ ಮೆರವಣಿಗೆಯು ಮಾರುತಿ ದೇವಸ್ಥಾನ, ಗಜಾನನ ದೇವಸ್ಥಾನ, ದ್ಯಾಮವ್ವನ ದೇವಸ್ಥಾನ, ಕೊಂತಿಮಲ್ಲಪ್ಪನ ದೇವಸ್ಥಾನ, ಪಟ್ಟಣ ಪಂಚಾಯತ, ದುರ್ಗಾ ಸರ್ಕಲ್, ಜಕ್ಕಲಿ ಕ್ರಾಸ್, ಹಳೆ ಬಸ್ ನಿಲ್ದಾಣ, ಮಾರೆಮ್ಮ ದೇವಸ್ಥಾನದ ಮೂಲಕ ಮರಳಿ ದರ್ಗಾಕ್ಕೆ ತಲುಪಿತು. ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ಸಾವಿರಾರು ಜನ ಭಕ್ತಾದಿಗಳು ಉರುಸಿನ ಮೇರವಣಿಗೆಯಲ್ಲಿ ಭಾಗಿಯಾಗಿದ್ದರು.