ವಿಜಯಸಾಕ್ಷಿ ಸುದ್ದಿ, ರೋಣ : ಮಾರನಬಸರಿ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮವು ಅದ್ದೂರಿಯಾಗಿ ಜರುಗಿತು. ಜಯಂತ್ಯುತ್ಸವದ ನಿಮಿತ್ತ ಬೆಳಿಗ್ಗೆ ಕುಂಭಮೇಳದೊಂದಿಗೆ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರದ ಮೆರವಣಿಗೆಯನ್ನು ನಡೆಸಲಾಯಿತು.
ಜಯಂತ್ಯುತ್ಸವದ ನಿಮಿತ್ತ ಗ್ರಾಮದಲ್ಲಿ 11 ದಿನಗಳ ಕಾಲ ಪುರಾಣ ಪ್ರವಚನಕಾರ ವೇ.ಮೂ. ಸಿದ್ದಲಿಂಗಯ್ಯ ಶಾಸ್ತ್ರೀಗಳು ಇವರ ನೇತೃತ್ವದಲ್ಲಿ ವಾಲ್ಮೀಕಿ ಮಹಾಋಷಿಗಳ ಪುರಾಣ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಧಾರ್ಮಿಕ ಗುರುಗಳು ಸೇರಿದಂತೆ ಮುಖಂಡರಾದ ಶಿವಪ್ಪ ತಳವಾರ, ಸತ್ಯಪ್ಪ ಪೂಜಾರ, ಶರಣಪ್ಪ ತಳವಾರ, ಮುದಿಯಪ್ಪ ತಳವಾರ, ಪರಸಪ್ಪ ತಳವಾರ, ಪರಸಪ್ಪ ಕಟ್ಟಿಮನಿ, ಅಶೋಕ ತಳವಾರ, ಪಕ್ಕೀರಪ್ಪ ತಳವಾರ, ಶಿವಪ್ಪ ಗುತ್ತೂರ, ಲಕ್ಷö್ಮಣ ತಳವಾರ ಸೇರಿದಂತೆ ಸಮಾಜದ ಪ್ರಮುಖರು ಭಾಗಿಯಾಗಿದ್ದರು.



