ವಿಜಯಸಾಕ್ಷಿ ಸುದ್ದಿ, ಗದಗ: ಭಾರತೀಯ ಸೇನೆಯಲ್ಲಿ 30 ವರ್ಷಗಳ ಕಾಲ ತಮ್ಮ ಅಮೋಘ ಸೇವೆ ಸಲ್ಲಿಸಿ ತಾಯ್ನಾಡಿಗೆ ಆಗಮಿಸಿದ ಹೊಂಬಳ ಗ್ರಾಮದ ಸುಬೇದಾರ್ ಜೀವನಸಾಬ್ ಬೂದಿಹಾಳ ಅವರನ್ನು ಹೊಂಬಳ ಗ್ರಾಮದಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ, ಹೊಂಬಳ ಮತ್ತು ಗದಗ ಜಿಲ್ಲೆಯ ಮಾಜಿ ಸೈನಿಕರ ನೇತೃತ್ವದಲ್ಲಿ ಭವ್ಯವಾಗಿ ಸ್ವಾಗತಿಸಲಾಯಿತು.
ಸಂಘದ ಜಿಲ್ಲಾಧ್ಯಕ್ಷ ಬಸಲಿಂಗಪ್ಪ ಮುಂಡರಗಿ, ದತ್ತಣ್ಣ ಜೋಶಿ, ಗುಳಯ್ಯ ಮಾಲಗಿತ್ತಿಮಠ, ಹೊಂಬಳ ಗ್ರಾಮದ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಗುರುಪಾದಯ್ಯ ಕೆಂಭಾವಿಮಠ, ಬೆಳಗಾವಿಯ ಆರ್ಮಿ ಕೋಚಿಂಗ್ ಸೆಂಟರ್‌ನ ತರಬೇತುದಾರ ಸುದೇಶ್ ಸನಾದಿ ಮುಂತಾದವರು ಸೈನಿಕರ ಶಕ್ತಿಯ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ವೆಂಕಪ್ಪ ಕಲಹಾಳ, ನಿಂಗಪ್ಪ ಚೋರಗಸ್ತಿ, ಬಸಪ್ಪ ಸೈದಾಪುರ್, ಪ್ರಕಾಶಪ್ಪ ಬಂಡಿಹಾಳ, ಚೆನ್ನಪ್ಪ ಹೊಸಮನಿ, ಸಿದು ಮುಧೋಳ, ಬೂದಪ್ಪ ಸಂಶಿ, ವೀರೇಶ್ ಬಾನಿಕಟ್ಟಿ, ಹನಮಪ್ಪ ಶಾಂತಗೇರಿ, ಶಿವಪ್ಪ ಹಡಪದ, ಚಂದ್ರಶೇಖರಪ್ಪ ಬಿಳೆಯಲಿ, ಬಸವರಾಜ್ ಹಿರೇಹಾಳ, ಅಪ್ಪಣ್ಣ ಹನಸಿ, ಮಹಾಂತೇಶ್ ಕುರಹಟ್ಟಿ ಸೇರಿದಂತೆ ಹೊಂಬಳ ಹಾಗೂ ಗದಗ ಜಿಲ್ಲೆಯ ಎಲ್ಲಾ ಹಾಲಿ ಮತ್ತು ಮಾಜಿ ಸೈನಿಕರು, ವೀರನಾರಿಯರು, ಅರೆಸೇನಾ ಪಡೆಗಳ ಯೋಧರು, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು, ಗ್ರಾಮದ ಗುರು-ಹಿರಿಯರು, ಬೂದಿಹಾಳ ಬಳಗದವರು ಹಾಗೂ ಗ್ರಾಮ ಪಂಚಾಯಿತಿಯ ಸದಸ್ಯರು ಉಪಸ್ಥಿತರಿದ್ದರು.


