ವಿಜಯಸಾಕ್ಷಿ ಸುದ್ದಿ, ಗದಗ: ಸಿದ್ಧಾರೂಢ ಸ್ವಾಮಿಗಳ 190ನೇ ಹಾಗೂ ಶ್ರೀ ಗುರುನಾಥರೂಡರ 115ನೇ ಜಯಂತ್ಯುತ್ಸವದ ಅಂಗವಾಗಿ ಶ್ರೀ ಸಿದ್ಧಾರೂಢ ಸ್ವಾಮಿ ಮಠ ಟ್ರಸ್ಟ್ ಕಮಿಟಿ ಹುಬ್ಬಳ್ಳಿ ಹಾಗೂ ವಿಶ್ವ ವೇದಾಂತ ಪರಿಷತ್ ವತಿಯಿಂದ ವಿಶ್ವ ಶಾಂತಿಗಾಗಿ ಆರೂಢ ಜ್ಯೋತಿ ಯಾತ್ರೆ ಹಾಗೂ ಶ್ರೀ ಸಿದ್ಧಾರೂಢ ಕಥಾಮೃತ ಮೆರವಣಿಗೆಯ ಶೋಭಾಯಾತ್ರೆ ರಾಜ್ಯಾದ್ಯಂತ ಸಂಚರಿಸಿದ್ದು, ಫೆ.20ರಿಂದ 26ರವರೆಗೆ ಅನೇಕ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿದೆ.
ಗದಗ-ಬೆಟಗೇರಿ ಅವಳಿ ನಗರಕ್ಕೆ ಆಗಮಿಸಿದ ಜ್ಯೋತಿ ಯಾತ್ರೆಗೆ ಕಾನೂನು, ಸಂಸದೀಯ ವ್ಯವಹಾರಗಳು, ಪ್ರವಾಸೋದ್ಯಮ ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ. ಪಾಟೀಲ, ಮಾಜಿ ಶಾಸಕರಾದ ಡಿ.ಆರ್. ಪಾಟೀಲರ ನೇತೃತ್ವದಲ್ಲಿ ಸ್ವಾಗತಿಸಿ, ನಗರದ ಪ್ರಮುಖ ರಸ್ತೆಗಳಲ್ಲಿ ಜ್ಯೋತಿಯು ಸಂಚರಿಸಿತು. ಮಹಿಳೆಯರು ಶ್ರೀಗಳ ಜ್ಯೋತಿ ಯಾತ್ರೆಗೆ ಆರತಿ ಬೆಳಗುವ ಮೂಲಕ ಸ್ವಾಗತ ಕೋರಿದರು.
ಈ ಸಂಧರ್ಭದಲ್ಲಿ ಕಾಂಗ್ರೆಸ್ ಮಹಿಳಾ ಮುಖಂಡರಾದ ದ್ರಾಕ್ಷಾಯಣಿ ಹಾಸಲಕರ, ನಗರಸಭಾ ಸದಸ್ಯರಾದ ಶಕುಂತಲಾ ಅಕ್ಕಿ, ಪರ್ವೀನ್ ಬಾನು ಮುಲ್ಲಾ, ಲಕ್ಷ್ಮಿ ಸಿದ್ದಮ್ಮನಹಳ್ಳಿ, ಸಾವಿತ್ರಿ ಹೂಗಾರ, ಸುಧಾ ಬೂದಾರಪೂರ, ಸರಸ್ವತಿ ದೇವರಕೊಂಡಿ, ಲಲಿತಾ ಗೋಳಗೊಳಕಿ, ಲಕ್ಷ್ಮಿ ಜಾಲಿಗಂಡಿ, ರಾಜೇಶ್ವರಿ, ಕುಸುಮಾ, ಶೈಲಾ ಜ್ಯೋಶಿ, ಶೋಭಾ, ಬಾಳಮ್ಮ, ಕಮಲಾ ಹಾದಿಮನಿ, ಮುಸ್ತಾನ್ ಸೈದ್, ಗೀತಾ ಹಬೀಬಿ ಮುಂತಾದವರಿದ್ದರು.