ಮಗ-ಮೊಮ್ಮಗನ ಜಗಳ ಬಿಡಿಸಲು ಹೋಗಿ ಸಾವಿಗೀಡಾದ ಅಜ್ಜಿ: ಅಷ್ಟಕ್ಕೂ ನಡೆದಿದ್ದೇನು!?

0
Spread the love

ಮೈಸೂರು:- ಮಗ- ಮೊಮ್ಮಗನ ಜಗಳ ಬಿಡಿಸಲು ಹೋದ ಅಜ್ಜಿ ಸಾವನ್ನಪ್ಪಿದ ಘಟನೆ ನಂಜನಗೂಡು ತಾಲ್ಲೂಕಿನ ಅಲ್ಲಯ್ಯನಪುರ ಗ್ರಾಮದಲ್ಲಿ ಜರುಗಿದೆ.

Advertisement

ಮೃತ ಅಜ್ಜಿಯನ್ನು 80 ವರ್ಷದ ನಾಗಮ್ಮ ಎಂದು ಗುರುತಿಸಲಾಗಿದೆ. ಇವರು ಮಗ ಮತ್ತು ಮೊಮ್ಮಗನ ಜಗಳ ಬಿಡಿಸಲು ಹೋಗಿ ಜೀವ ಕಳೆದುಕೊಂಡಿದ್ದಾರೆ. ದಿನನಿತ್ಯದ ಖರ್ಚಿಗೆ ಹಣ ನೀಡಿಲ್ಲ ಎಂಬ ಕಾರಣಕ್ಕೆ ಅಪ್ರಪ್ತ ಮಗ ತಂದೆಯ ಜೊತೆ ಜಗಳ ಮಾಡಿದ್ದಾನೆ.

ಇಬ್ಬರ ನಡುವಿನ ಜಗಳ ಜೋರಾಗಿ ನಡೆಯುತ್ತಿತ್ತು. ಇದನ್ನು ಗಮನಿಸಿದ ಅಜ್ಜಿ ನಾಗಮ್ಮ, ಅಲ್ಲಿಗೆ ಬಂದಿದ್ದಾಳೆ. ಜಗಳ ಮಾಡದಂತೆ ಕೇಳಿಕೊಂಡಿದ್ದಾಳೆ. ಆಗ ಕೋಪಿಸಿಕೊಂಡ ಮೊಮ್ಮಗ ಅಜ್ಜಿಯ ಜುಟ್ಟು ಹಿಡಿದು ಕಾಂಕ್ರೀಟ್ ರಸ್ತೆಗೆ ಎಳೆದು, ನಂತರ ತಳ್ಳಿದ್ದಾನೆ. ತಲೆಗೆ ಪೆಟ್ಟುಬಿದ್ದ ಕಾರಣ ಅಜ್ಜಿ ನಾಗಮ್ಮ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಕೃತ್ಯ ನಡೆದ ನಂತರ ಮೊಮ್ಮಗ ನಾಪತ್ತೆಯಾಗಿದ್ದಾನೆ.

ಘಟನೆ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here