ಅನಿಷ್ಟಗಳನ್ನು ನಿವಾರಿಸುವಲ್ಲಿ ಪಣತೊಟ್ಟ ಮಹಾವೀರ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಸಂತ ಸೇವಾಲಾಲರು ಸಮಾಜದಲ್ಲಿನ ಅನಿಷ್ಟಗಳನ್ನು ನಿವಾರಿಸುವಲ್ಲಿ ಪಣತೊಟ್ಟ ಮಹಾವೀರರು ಎಂದು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ. ಪಾಟೀಲ ಅಭಿಪ್ರಾಯಪಟ್ಟರು.

Advertisement

ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಜರುಗಿದ ಶ್ರೀ ಸಂತ ಸೇವಾಲಾಲರ 286ನೇ ಜಯಂತ್ಯುತ್ಸವದಲ್ಲಿ ಪಾಲ್ಗೊಂಡು ಭೋಗ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸೇವಾವಾಲರು ಸರ್ವಧರ್ಮದ ಆರಾಧ್ಯ ದೈವ. ಎಲ್ಲರೂ ಸಂಘಟಿತರಾಗಿ ಅರಣ್ಯ ಭೂಮಿಗೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರಕ್ಕಾಗಿ ಸಭೆ ಕರೆದು ಚರ್ಚಿಸಲಾಗುತ್ತದೆ ಎಂದು ತಿಳಿಸಿದರಲ್ಲದೆ, ಸೇವಾಲಾಲ ವೃತ್ತವನ್ನು ಅಭಿವೃದ್ಧಿಗೊಳಿಸಲು ಆಯುಕ್ತರಿಗೆ ಸೂಚಿಸಿದರು.

ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ ಮಾಡಿದ ತರುವಾಯ ಸೇವಾಲಾಲ ಮಹಾರಾಜರ ಭಾವಚಿತ್ರದ ರಥವು ನಗರದ ಗಾಂಧಿ ವೃತ್ತದಿಂದ ಪ್ರಾರಂಭವಾಗಿ ವಿವಿಧ ವೃತ್ತಗಳಲ್ಲಿ ಸಂಚರಿಸಿ ಡಾ. ಬಿ.ಆರ್. ಅಂಬೇಡ್ಕರ್ ಭವನಕ್ಕೆ ಬಂದು ತಲುಪಿದರು.

ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮಾಜಿ ಸಚಿವ, ಹಾಲಿ ನರಗುಂದ ಶಾಸಕ ಸಿ.ಸಿ. ಪಾಟೀಲ ಚಾಲನೆ ನೀಡಿ ಮಾತನಾಡಿ, ಸಮಾಜದವರು ಸಂಘಟಿತರಾಗಬೇಕು. ನೆರೆ ರಾಜ್ಯಕ್ಕೆ ಗುಳೆ ಹೋದ ಕುಟುಂಬದವರ ಮಕ್ಕಳ ಶಿಕ್ಷಣಕ್ಕಾಗಿ ಪ್ರತ್ಯೇಕವಾಗಿ ವಿಶೇಷ ವಸತಿ ಶಾಲೆ ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಸಮಾಜವು ಉತ್ತಮ ಶಿಕ್ಷಣ ಪಡೆದು ದೇಶದಲ್ಲಿರುವ ಉನ್ನತ ಹುದ್ದೆಯನ್ನು ಅಲಂಕರಿಸಬೇಕು. ಶಿಕ್ಷಣಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗೆ ಸದಾ ಸ್ಪಂದಿಸುವುದಾಗಿ ಹೇಳಿದರು.

ವೇದಿಕೆಯಲ್ಲಿ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಲಿಂಗಸ್ಗೂರಿನ ವಿಜಯ ಮಹಾಂತೇಶ್ವರಮಠದ ಸಿದ್ದಲಿಂಗ ಮಹಾಸ್ವಾಮಿಗಳು ಹಾಗೂ ಕೃಷ್ಣಾಪುರದ ಗವಿಮಠ ಆದ್ರಹಳ್ಳಿ ಬಂಜಾರ ಗುರುಪೀಠದ ಡಾ. ಕುಮಾರ ಮಹಾರಾಜರು ದಿವ್ಯ ಸಾನ್ನಿಧ್ಯ ವಹಿಸಿ ಹೋಮಾ ಸಲ್ಲಿಸುವ ಮೂಲಕ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಂದು ಈ.ನಾಯಕ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಿರಹಟ್ಟಿ ಮತಕ್ಷೇತ್ರದ ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಶಾಸಕ ರಾಮಣ್ಣ ಲಮಾಣಿ, ಮುಖಂಡ ಆನಂದ ಗಡ್ಡದೇವರಮಠ, ನಗರಸಭೆ ವಿರೋದ ಪಕ್ಷದ ನಾಯಕ ಎಲ್.ಡಿ. ಚಂದಾವರಿ, ನಗರಸಭೆ ಸದಸ್ಯೆ ವಿದ್ಯಾವತಿ ಗಡಗಿ, ವಿವಿಧ ತಾಂಡಾಗಳ ನಾಯಕರಾದ ಡಿ.ಎಲ್. ನಾಯಕ, ಶಿವಪುತ್ರಪ್ಪ ನಾಯಕ, ಶಿವಪ್ಪ ನಾಯಕ, ರಾಮಪ್ಪ ನಾಯಕ, ಮಿಟ್ಟಪ್ಪ ನಾಯಕ, ರಾಜು ನಾಯಕ, ಪಾಂಡಪ್ಪ ನಾಯಕ, ಖಿಮಪ್ಪ ನಾಯಕ, ನೂರಪ್ಪ ನಾಯಕ, ಕುಬೇರ ನಾಯಕ, ಟೀಕು ನಾಯಕ, ಶ್ರೀನಿವಾಸ ನಾಯಕ, ತೇಜಪ್ಪ ನಾಯಕ ಹಾಗೂ ಕೆ.ಸಿ. ನಭಾಪೂರ, ಐ.ಎಸ್. ಪೂಜಾರ, ಚಂದ್ರಕಾಂತ ಚವ್ಹಾಣ, ಸೋಮು ಲಮಾಣಿ, ಪಾಂಡು ಚವ್ಹಾಣ, ನೀಲು ರಾಠೋಡ, ಟಿ.ಡಿ. ಪೂಜಾರ, ವಿಠ್ಠಲ್ ತೋಟದ್, ಡಾ. ವೆಂಕಟೇಶ ರಾಠೋಡ, ಗಣೇಶ ಲಮಾಣಿ, ಪರಮೇಶ ನಾಯಕ, ಅನಿಲ ಕಾರಭಾರಿ, ಹಾಮಜಪ್ಪ ಬಡಿಗೇರ, ಕುಭೇರಪ್ಪ ಪವಾರ, ತುಕಾರಾಮ ಲಮಾಣಿ, ತುಕಾರಾಮ ನಾಯಕ, ಲೋಕೆಶ ಕಟ್ಟಿಮನಿ, ಶೀವು ಅರಕಸಾಲಿ, ಸುಭಾಶ ಗುಡಿಮನಿ, ಕುಭೇರಪ್ಪ ರಾಠೋಡ, ದಯಾನಂದ ಪವಾರ, ಭೀಮಸಿಂಗ್ ರಾಠೋಡ ಹಾಗೂ ಸಮಾಜದ ಗಣ್ಯರು ಹಾಜರಿದ್ದರು.

ವಕೀಲರಾದ ರವಿಕಾಂತ ಅಂಗಡಿ ಮಾತನಾಡಿ, ಜಿಲ್ಲೆಯಲ್ಲಿ ಬಂಜಾರ ಸಮುದಾಯಕ್ಕೆ ಸ್ವಂತ ಸಮುದಾಯ ಭವನದ ಅವಶ್ಯಕತೆ ಇದೆ. ಬಗರಹುಕುಂ ಸಾಗುವಳಿ ಜಮೀನು, ಅರಣ್ಯ ಭೂಮಿ ಉಳುಮೆದಾರರಿಗೆ ಹಕ್ಕುಪತ್ರಗಳನ್ನು ನೀಡಬೇಕು. ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ಸರ್ಕಾರ ಯೋಜನೆಗಳನ್ನು ರುಪಿಸಬೇಕು ಹಾಗೂ ನಮ್ಮ ಸಮಾಜ ಜಾಗೃತರಾಗಿ ಸರ್ಕಾರದಿಂದ ಒದಗಿಸುವ ಸವಲತ್ತುಗಳನ್ನು ಪಡೇಯಬೇಕು ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here