ಕ್ಲಬ್‌ನಿಂದ ಸಮಾಜಸೇವೆಗೆ ಉತ್ತಮ ಅವಕಾಶ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಇನ್ನರ್‌ವೀಲ್ ಸಂಸ್ಥೆಯ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಶನಿವಾರ ನೆರವೇರಿತು. ಸಂಸ್ಥೆಯ 2025-26ನೇ ಸಾಲಿನ ನೂತನ ಅಧ್ಯಕ್ಷೆಯಾಗಿ ಗಿರಿಜಾ ಮುದಗಲ್, ಕಾರ್ಯದರ್ಶಿಯಾಗಿ ನಿರ್ಮಲಾ ಅಡವಿ, ಖಜಾಂಚಿಯಾಗಿ ಮಂಜುಳಾ ಅಕ್ಕಿ ಮತ್ತು ಐಎಸ್‌ಓ ಮೈತ್ರಾದೇವಿ ಹಿರೇಮಠ ಹಾಗು ಎಡಿಟರ್ ಆಗಿ ಡಾ. ಶೃತಿ ಹೂವಿನ ಅಧಿಕಾರ ಸ್ವೀಕರಿಸಿದರು.

Advertisement

ಗದಗ ಇನ್ನರ್‌ವೀಲ್ ಸಂಸ್ಥೆಯ ಪಿಡಿಸಿ ಪ್ರೇಮಾ ಗುಳಗೌಡರ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇನ್ನರ್‌ವೀಲ್ ಸಂಸ್ಥೆ ಒಂದು ಅಂತಾರಾಷ್ಟ್ರೀಯ ಸಂಸ್ಥೆಯಾಗಿದ್ದು, ಲಕ್ಷಾಂತರ ಸದಸ್ಯರು ಇದರಲ್ಲಿ ಸೇವಾ ರೂಪದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಡ ಜನರಿಗಾಗಿ ಸಹಾಯಹಸ್ತ ಚಾಚುವ ಮನಸ್ಸು ಇದ್ದವರಿಗೆ ಇನ್ನರ್‌ವೀಲ್ ಸಂಸ್ಥೆ ಸಹಕಾರಿಯಾಗಿದೆ. ಸಮಾಜದಲ್ಲಿ ನಮ್ಮಿಂದ ನಾಲ್ಕು ಜನಕ್ಕೆ ಒಳ್ಳೆಯದಾಗುವುದನ್ನು ಬಯಸಬೇಕು ಎನ್ನುವವರಿಗೆ ಕ್ಲಬ್ ಒಳ್ಳೆಯ ಅವಕಾಶವನ್ನು ಕಲ್ಪಿಸಿಕೊಡುತ್ತದೆ. ಲಕ್ಷ್ಮೇಶ್ವರ ಸಂಸ್ಥೆ ಕಳೆದ 15 ವರ್ಷಗಳಿಂದ ನಿರಂತರವಾಗಿ ಉತ್ತಮ ಕಾರ್ಯಗಳನ್ನು ಮಾಡುತ್ತಿರುವದು ಶ್ಲಾಘನೀಯ ಎಂದರು.

ನೂತನ ಅಧ್ಯಕ್ಷೆ ಗಿರಿಜಾ ಮುದಗಲ್ ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ದೊರಕಿರುವದು ನಮ್ಮ ಭಾಗ್ಯವಾಗಿದೆ. ನನ್ನ ಅಧಿಕಾರವಧಿಯಲ್ಲಿ ಸಂಸ್ಥೆಯು ಹಾಕಿಕೊಟ್ಟ ಮಾರ್ಗದಲ್ಲಿ ಕಾರ್ಯಗಳನ್ನು ಮಾಡುವದಾಗಿ ಹೇಳಿದರು.

ಇದೇ ಸಂದರ್ಭದಲ್ಲಿ ಆರು ಜನ ಸದಸ್ಯರಾಗಿ ಸಂಸ್ಥೆಗೆ ಸೇರ್ಪಡೆಗೊಂಡರು. ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಲಾಯಿತು. ಮಂಜುಳಾ ಓದುನವರ ಪ್ರಾರ್ಥಿಸಿದರು. ಅಧ್ಯಕ್ಷೆ ರೇಖಾ ವಡಕಣ್ಣವರ ಸ್ವಾಗತಿಸಿದರು, ಸುಲೋಚನಾ ಜವಾಯಿ ಪರಿಚಯಿಸಿದರು. ಜಯಶ್ರೀ ಮೆಳ್ಳಿಗೇರಿ ನಿರೂಪಿಸಿದರು. ಅಪೂರ್ವ ಪಾಟೀಲ, ದೀಪಿಕಾ ಪಾಟೀಲ, ಶಕುಂತಲಾ ಅಳಗವಾಡಿ, ನಿರ್ಮಲಾ ಅರಳಿ, ಅನ್ನಪೂರ್ಣ ಓದುನವರ, ಡಾ. ಸುಜಾತಾ ಸಂಗೂರ, ಕುಸುಮಾ, ಜಯಲಕ್ಷ್ಮೀ ಮಹಾಂತಶೆಟ್ಟರ, ಶೈಲಾ ಆದಿ ಮುಂತಾದವರು ಉಪಸ್ಥಿತರಿದ್ದರು.

ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷೆ ಹಾಗೂ ಹಿರಿಯ ಸದಸ್ಯೆಯಾಗಿರುವ ಮಾಲಾದೇವಿ ದಂದರಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಇನ್ನರ್‌ವೀಲ್ ಸಂಸ್ಥೆ ಪಟ್ಟಣದಲ್ಲಿ 15 ವರ್ಷಗಳ ಹಿಂದೆ ಪ್ರಾರಂಭವಾದಾಗಿನಿಂದ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಹಮ್ಮಿಕೊಂಡು ಬಂದಿದೆ. ಸಂಸ್ಥೆಯಿಂದ ಶೈಕ್ಷಣಿಕ, ಸಾಮಾಜಿಕ, ಆರೋಗ್ಯ, ಪರಿಸರ ಇತ್ಯಾದಿ ಕಾರ್ಯಕ್ರಮಗಳು ಎಲ್ಲ ಸದಸ್ಯರ ಸಹಕಾರದಿಂದ ಯಶಸ್ವಿಯಾಗಿ ಮಾಡಲಾಗುತ್ತಿದೆ ಎಂದರು.


Spread the love

LEAVE A REPLY

Please enter your comment!
Please enter your name here