ಬೆಂಗಳೂರು: ದೇಶದ ಉತ್ಕೃಷ್ಟ ರಾಜಕಾರಣಿ. ಅವರ ಅಗಲುವಿಕೆ ದೇಶಕ್ಕೆ ತುಂಬಲಾರದ ನಷ್ಟ ಎಂದು ಮಾಜಿ ಸಿಎಂ ಡಿ.ವಿ ಸದಾನಂದಗೌಡ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮನಮೋಹನ್ ಸಿಂಗ್ ಅವರು ಪ್ರಧಾನಿ ಸ್ಥಾನದ ಘನತೆ ಉಳಿಸಿಕೊಂಡಿದ್ದರು.
ಅವರ ವಿರುದ್ಧ ತಿರುಗಿ ಬಿದ್ದರೂ ವಿಚಲಿತರಾಗದೆ ಗೌರವಯುತವಾಗಿ ನಡೆದುಕೊಳ್ಳುತ್ತಿದ್ದರು. ಅವರು ದೇಶದ ಉತ್ಕೃಷ್ಟ ರಾಜಕಾರಣಿ. ಅವರ ಅಗಲುವಿಕೆ ದೇಶಕ್ಕೆ ತುಂಬಲಾರದ ನಷ್ಟ ಎಂದು ಹೇಳಿದ್ದಾರೆ.ಇನ್ನು ಸೋನಿಯಾ ಗಾಂಧಿ, ಇಂದಿರಾ ಗಾಂಧಿಯವರ ಕೈಗೊಂಬೆ ಎಂದು ಅನಿಸಿಕೊಂಡ್ರೂ ಸಹ, ಅಂತಹ ಪರಿಸ್ಥಿತಿಯನ್ನು ದೇಶದ ಹಿತಾಸಕ್ತಿಗೆ ಪೂರಕವಾಗಿ ಅವರು ಪರಿವರ್ತಿಸಿದ್ದರು ಎಂದು ಹೇಳಿದರು.



