Crime News: ಹೆಂಡ್ತಿ ಜೊತೆ ಮಲಗಿದ್ದ ವ್ಯಕ್ತಿಯ ಭೀಕರ ಕೊಲೆ!

0
Spread the love

ಉಡುಪಿ:- ಮನೆಗೆ ನುಗ್ಗಿ ಮಲಗಿದ್ದ ವ್ಯಕ್ತಿಯನ್ನು ತಲ್ವಾರ್‌ನಿಂದ ಕೊಚ್ಚಿ ದುಷ್ಕರ್ಮಿಗಳು ಎಸ್ಕೇಪ್ ಆಗಿರುವ ಘಟನೆ ಪುತ್ತೂರಿನಲ್ಲಿ ಜರುಗಿದೆ. ವಿನಯ್ ದೇವಾಡಿಗ (35) ಮೃತ ದುರ್ದೈವಿ. ವಿನಯ್ ಮನೆ ರಾತ್ರಿ ವೇಳೆ ಮೂವರು ದುಷ್ಕರ್ಮಿಗಳು ಬಂದಿದ್ದರು.

Advertisement

ಈ ವೇಳೆ, ಸ್ನೇಹಿತರಿರಬಹುದು ಎಂದು ಮನೆಯವರು ಒಳಗೆ ಬಿಟ್ಟಿದ್ದಾರೆ. ಬಳಿಕ ಮೂವರು ಹೆಂಡತಿ ಮತ್ತು ಮಗುವಿನ ಜೊತೆ ಮಲಗಿದ್ದ ವಿನಯ್ ಮೇಲೆ ತಲ್ವಾರ್‍ನಿಂದ ದಾಳಿ ನಡೆಸಿ ಹತ್ಯೆಗೈದಿದ್ದಾರೆ. ದಾಳಿ ವೇಳೆ ತಡೆಯಲು ಹೋದ ಪತ್ನಿಗೆ ಸಹ ಗಾಯವಾಗಿದೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here