HomeGadag Newsಮಹಿಳೆಯರಿಗೆ, ಮಕ್ಕಳಿಗೆ ವರದಾನವಾದ `ಕೂಸಿನ ಮನೆ’

ಮಹಿಳೆಯರಿಗೆ, ಮಕ್ಕಳಿಗೆ ವರದಾನವಾದ `ಕೂಸಿನ ಮನೆ’

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ರೋಣ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಅಡಿಯಲ್ಲಿ ಕಾರ್ಯ ನಿರ್ವಹಿಸಲಿರುವ ಕೂಲಿ ಕಾರ್ಮಿಕ ಮಹಿಳೆಯರಿಗೆ ತಮ್ಮ ಮಕ್ಕಳ ಆರೈಕೆಯ ಚಿಂತೆಯಿಂದ ಮುಕ್ತಿ ನೀಡುವ ಸಲುವಾಗಿ ರಾಜ್ಯ ಸರ್ಕಾರವು ‘ಕೂಸಿನ ಮನೆ’ ಶಿಶು ಪಾಲನಾ ಕೇಂದ್ರಗಳನ್ನು ಸ್ಥಾಪನೆ ಮಾಡಿದ್ದು, ಇದು ಅಬ್ಬಿಗೇರಿ ಗ್ರಾಮದಲ್ಲಿ ಬಹಳ ಅಚ್ಚುಕಟ್ಟಾಗಿ ನಡೆದು, ತಾಲೂಕಿನಲ್ಲೇ ಮಾದರಿ ಕೂಸಿನ ಮನೆಯಾಗಿದೆ ಎಂದು ತಾಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ.ಕಂದಕೂರ ಹೇಳಿದರು.

ಅಬ್ಬಿಗೇರಿ ಗ್ರಾ.ಪಂನಲ್ಲಿ ಇರುವ ಕೂಸಿನ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಅಬ್ಬಿಗೇರಿ ಗ್ರಾಮದಲ್ಲಿ ಕೂಸಿನ ಮನೆ ಉತ್ತಮವಾಗಿ ನಡೆದಿದೆ. ಇಲ್ಲಿನ ಕೂಲಿ ಕಾರ್ಮಿಕರು ತಮ್ಮ 6 ತಿಂಗಳಿAದ 3 ವರ್ಷದೊಳಗಿನ ಮಕ್ಕಳನ್ನು ಪ್ರತಿದಿನ ಬಿಟ್ಟು ಕೆಲಸಕ್ಕೆ ಹೋಗಿ, ಮಹಿಳಾ ಕಾರ್ಮಿಕರು ಯಾವುದೇ ಚಿಂತೆಯಿಲ್ಲದೆ ತಮ್ಮ ಕೆಲಸದಲ್ಲಿ ತೊಡಗಿಕೊಳ್ಳಬಹುದು.

ಅಬ್ಬಿಗೇರಿ ಗ್ರಾಮದಲ್ಲಿ ಪ್ರತಿದಿನ 2000ಕ್ಕೂ ಅಧಿಕ ಜನರು ನರೇಗಾ ಸಾಮೂಹಿಕ ಕಾಮಗಾರಿಯಡಿ ಕೆಲಸಕ್ಕೆ ಬರುತ್ತಾರೆ. ಅದರಲ್ಲಿ ಕೆಲವು ಅವಿಭಕ್ತ ಕುಟುಂಬಗಳಲ್ಲಿ ವಾಸಿಸುವ ಜನರು ತಮ್ಮ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಹೊಗುತ್ತಾರೆ. ಇನ್ನು ಕೆಲವು ವಿಭಕ್ತ ಕುಟುಂಬಗಳಲ್ಲಿ ವಾಸಿಸುವ ಜನರು ತಮ್ಮ ಮಕ್ಕಳನ್ನು ಎಲ್ಲಿ ಬಿಟ್ಟು ಹೋಗಬೇಕು ಎಂಬ ಚಿಂತೆ ಅವರನ್ನು ಕಾಡುತಿತ್ತು. ಆದರೆ ಅದಕ್ಕೆ ಪರಿಹಾರ ಎಂಬಂತೆ ಕೂಸಿನ ಮನೆ ಕಾರ್ಯ ನಿರ್ವಹಿಸುತ್ತದೆ.

ಗ್ರಾಮದಲ್ಲಿ ಪ್ರತಿ ದಿನ ಕೂಸಿನ ಮನೆಗೆ 15ಕ್ಕೂ ಹೆಚ್ಚು ಮಕ್ಕಳನ್ನು ಪಾಲಕರು ಬಿಟ್ಟು ಹೋಗುತ್ತಾರೆ. ಆರೈಕೆದಾರರಾದ ಐಶ್ವರ್ಯ ದೊಡ್ಡಮನಿ ಹಾಗೂ ಲಕ್ಷ್ಮೀ ತಲ್ಲೂರ ಮಕ್ಕಳನ್ನು ದಿನನಿತ್ಯ ಆಟವಾಡಿಸುತ್ತಾ ಉತ್ಕೃಷ್ಟ ಮಟ್ಟದ ಆಹಾರವನ್ನು ತಿನ್ನಿಸುತ್ತಾ ಮಕ್ಕಳ ಲಾಲನೆ ಪಾಲನೆ ಮಾಡುತ್ತಾರೆ ಎಂದು ತಿಳಿಸಿದರು.

“ಕಾರ್ಯ ನಿರ್ವಾಹಕ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕೂಸಿನ ಮನೆಯನ್ನು ಚೆನ್ನಾಗಿ ನೋಡಿಕೊಳ್ಳಲು ಶ್ರಮವಹಿಸುತ್ತಿದ್ದೇವೆ. ಕೂಸಿನ ಮನೆಯು ನರೇಗಾ ಮಹಿಳಾ ಕಾರ್ಮಿಕರ ಸಬಲೀಕರಣಕ್ಕೆ ಮಹತ್ವದ ಕೊಡುಗೆಯಾಗಿದೆ. ಇದು ಕೇವಲ ಮಕ್ಕಳ ಆರೈಕೆಗೆ ಮಾತ್ರವಲ್ಲ, ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ”.

– ಲೋಹಿತ ಎಂ.

ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು, ಅಬ್ಬಿಗೇರಿ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!