ವಿಜಯಸಾಕ್ಷಿ ಸುದ್ದಿ, ಗದಗ: ಗದುಗಿನ ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯು ಪೂಜ್ಯ ಗುರು ಪುಟ್ಟರಾಜರ ನಿಜವಾದ ಅಭಿಮಾನಿ ಭಕ್ತರ ಮಹಾ ಮನೆಯಾಗಿರುವ ದಾವಣಗೆರೆಯಲ್ಲಿ ಮಾರ್ಚ್ ಕೊನೆಯ ಅಥವಾ ಏಪ್ರಿಲ್ ಮೊದಲ ವಾರ ಡಾ. ಪಂ. ಪುಟ್ಟರಾಜರ ಅಭಿಮಾನಿ ಭಕ್ತರ ಬೃಹತ್ ಸಮಾವೇಶ ಹಮ್ಮಿಕೊಂಡಿದೆ.
ಒಂದು ದಿನದ ಈ ಸಮಾವೇಶದಲ್ಲಿ ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ ಸಾಹಿತ್ಯ ಚಿಂತನ-ಮಂಥನ, ರಾಜ್ಯಮಟ್ಟದ ಭಕ್ತಿಗೀತೆ ಗೋಷ್ಠಿ ಮತ್ತು ವಚನ ಗೋಷ್ಠಿ, ಭಕ್ತಿಗೀತೆ ಗಾಯನ ಮತ್ತು ವಚನ ಗಾಯನ ಹಾಗೂ ಶಾಸ್ತ್ರೀಯ ನೃತ್ಯ ಗೋಷ್ಠಿಗಳನ್ನು ಆಯೋಜಿಸಿದೆ. ಈ ಸಮಾವೇಶದಲ್ಲಿ ಅಭಿಮಾನಿ ಭಕ್ತ ಪ್ರತಿನಿಧಿಯಾಗಿ ಭಾಗವಹಿಸಿ ಭಕ್ತಿ ಗೀತ ಗೋಷ್ಠಿ, ವಚನಗೋಷ್ಠಿ, ಭಕ್ತಿ ಗೀತೆ ಗಾಯನ ಮತ್ತು ನೃತ್ಯ ಮತ್ತು ನುಡಿ ನಮನ ಸಲ್ಲಿಸಲು ವಿನಂತಿಸಿಕೊಳ್ಳಲಾಗಿದೆ.
ಪ್ರತಿನಿಧಿಯಾಗಿ ಹೆಸರು ನೋಂದಾಯಿಸಿಕೊಂಡು ಗೋಷ್ಠಿಗಳಲ್ಲಿ ಭಾಗವಹಿಸುವ ಪೂಜ್ಯರ ಅಭಿಮಾನಿ ಭಕ್ತ, ಕವಿ-ಕಲಾವಿದರಿಗೆ ಅಭಿಮಾನಿ ಭಕ್ತ ಶ್ರೇಷ್ಠ, ಪುಟ್ಟರಾಜ ಸಾಹಿತ್ಯ, ಸಂಗೀತ ಮತ್ತು ನೃತ್ಯ ಸೇವಾಶ್ರೀ ಸತ್ಕಾರ ನೀಡಿ ಗೌರವ ಸಲ್ಲಿಸಲಾಗುವುದು. ದಾವಣಗೆರೆ ಜಿಲ್ಲೆಯ ಹೊರಗಿನಿಂದ ಬರುವ ಅಭಿಮಾನಿ ಭಕ್ತರಿಗೆ ಸಾಮೂಹಿಕ ವಸತಿ ವ್ಯವಸ್ಥೆ ಮಾಡಲಾಗುವುದು.
ಇದೇ ಸಂದರ್ಭದಲ್ಲಿ ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ಸದಸ್ಯರಾಗಿ ಸಮಿತಿಗೆ ಅನುಪಮ ಸೇವೆ ಸಲ್ಲಿಸಿದ ಅಭಿಮಾನಿ ಭಕ್ತರಿಗೆ ಪುಟ್ಟರಾಜ ಗುರು ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಆಸಕ್ತರು, ಗೋಷ್ಠಿಗಳ ನಿರ್ವಾಹಕಿ ವಾಣಿ ಬಸವರಾಜ್, ದಾವಣಗೆರೆ ಇವರ ವಾಟ್ಸಪ್ ನಂ: 99020 52121 ಅಥವಾ 98867 17732 ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಸಂಸ್ಥಾಪಕ ವೇ. ಚನ್ನವೀರ ಸ್ವಾಮಿಗಳು ಹಿರೇಮಠ (ಕಡಣಿ) ಗದಗ ಇವರು ಪತ್ರಿಕಾ ಪ್ರಕಟಣೆ ಮೂಲಕ ವಿನಂತಿಸಿಕೊAಡಿದ್ದಾರೆ.