ಜ್ಯೂ.ಎನ್‌ಟಿಆರ್‌, ಪ್ರಶಾಂತ್‌ ನೀಲ್ ಹೊಸ ಚಿತ್ರಕ್ಕೆ ಕುಮಟಾದಲ್ಲಿ ತಯಾರಾಗಿದೆ ಬೃಹತ್‌ ಸೆಟ್‌

0
Spread the love

ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಸ್ಟಾರ್‌ ನಟ ಜ್ಯೂ.ಎನ್‌ಟಿಆರ್ ಕಾಂಬಿನೇಚನ್‌ ನ ಹೊಸ ಚಿತ್ರದ ಶೂಟಿಂಗ್ ಕುಮಟಾದ ಬೀಚ್‌ನಲ್ಲಿ ನಡೆಯುತ್ತಿದೆ. ಇದಕ್ಕಾಗಿ ಕುಮಟಾದಲ್ಲಿ ಬೃಹತ್‌ ಸೆಟ್‌ ಹಾಕಲಾಗಿದ್ದು, ಬೀಚ್‌ ಬಳಿ ಪ್ರಶಾಂತ್‌ ನೀಲ್‌ ಹಾಗೂ ತಾರಕ್‌ ಮಾತನಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. 

Advertisement

ಉತ್ತರ ಕನ್ನಡದ ಕಡಲ ಕಿನಾರೆಯಲ್ಲಿ ಜ್ಯೂ.ಎನ್‌ಟಿಆರ್ ಹೊಸ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಕುಮಟಾದ ಸುತ್ತಮುತ್ತಲಿನ ಕೆಲ ಸ್ಥಳಗಳಲ್ಲಿ ಅದ್ಧೂರಿಯಾಗಿ ಸೆಟ್ ಹಾಕಿ ಶೂಟಿಂಗ್ ಮಾಡಲಾಗುತ್ತಿದೆ. ಅಂದ ಹಾಗೆ ಈ ಚಿತ್ರಕ್ಕಾಗಿ ಜೂನಿಯರ್‌ ಎನ್‌ ಟಿ ಆರ್‌ ಬರೋಬ್ಬರಿ  18 ಕೆಜಿ ತೂಕ ಇಳಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಜೂನಿಯರ್‌ ಜೂ ಎನ್​ಟಿಆರ್ ಹಲವು ದಿನಗಳ ಕಾಲ ಇಲ್ಲಿಯೇ ಇದ್ದು ಚಿತ್ರೀಕರಣ ಮಾಡಲಿದ್ದಾರೆ. ಸಿನಿಮಾ ಸೆಟ್​ನಲ್ಲಿ ಬೃಹತ್ ಹೆಲಿಕಾಪ್ಟರ್, ಮನೆಗಳು, ರೈಲ್ವೆ ಟ್ರ್ಯಾಕ್, ರೈಲ್ವೆ ಭೋಗಿಗಳು, ಭಾರಿ ಬೃಹತ್ ಬಂದೂಕುಗಳು, ಟ್ಯಾಂಕರ್​ಗಳನ್ನು ತಂದು ನಿಲ್ಲಿಸಲಾಗಿದೆ.

ರಾಮನಗಿಂಡಿ ಕಡಲ ಕಿನಾರೆಯಲ್ಲಿ ಈ ಬೃಹತ್ ಸೆಟ್ ನಿರ್ಮಾಣ ಮಾಡಲಾಗಿದ್ದು ಪ್ರಶಾಂತ್ ನೀಲ್ ಅವರ ‘ಸಲಾರ್’, ‘ಕೆಜಿಎಫ್​’ ಸಿನಿಮಾಗಳಿಗೆ ಸೆಟ್ ನಿರ್ಮಿಸಿದ್ದ ತಂಡವೇ ಜೂ ಎನ್​ಟಿಆರ್ ಸಿನಿಮಾಕ್ಕೂ ಸೆಟ್ ನಿರ್ಮಾಣ ಮಾಡಿದೆ. ಪ್ರತಿದಿನ ಬೆಳಿಗ್ಗೆ 7 ರಿಂದ ಸಂಜೆ 7ರ ವರೆಗೆ ಸಿನಿಮಾ ಚಿತ್ರೀಕರಣ ನಿರಾತಂಕವಾಗಿ ಸಾಗುತ್ತಿದೆ. ಸಿನಿಮಾ ಸೆಟ್​ಗೆ ಸಾರ್ವಜನಿಕರಿಗೆ ಪ್ರವೇಶ ನಿರಾಕರಿಸಲಾಗಿದೆ.

ಸಿನಿಮಾದಲ್ಲಿ ಜೂ ಎನ್​ಟಿಆರ್ ಎದುರು ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಪ್ರಶಾಂತ್ ನೀಲ್ ಅವರ ಈ ಹಿಂದಿನ ಸಿನಿಮಾಗಳಿಗೆ ಸಂಗೀತ ನೀಡಿದ್ದ ರವಿ ಬಸ್ರೂರು ಅವರೇ ಈ ಸಿನಿಮಾಕ್ಕೂ ಸಂಗೀತ ನೀಡಲಿದ್ದಾರೆ. ಮುಂದಿನ ವರ್ಷ ಜ.9ರಂದು ಸಿನಿಮಾ ರಿಲೀಸ್ ಮಾಡೋದಾಗಿ ಚಿತ್ರತಂಡ ತಿಳಿಸಿದೆ.


Spread the love

LEAVE A REPLY

Please enter your comment!
Please enter your name here