ಚಿಕ್ಕಮಗಳೂರು:- ಭಾರೀ ಗಾಳಿಗೆ ಬೃಹದಾಕಾರದ ಮರ ಧರೆಗುರುಳಿದ ಘಟನೆ ಕಲ್ಲತ್ತಿಗಿರಿಯಲ್ಲಿ ಜರುಗಿದೆ. ಘಟನೆಯಲ್ಲಿ ಆಟೋ ಹಾಗೂ ಕಾರು ಜಖಂಗೊಂಡಿದ್ದು, ಪರಿಣಾಮ ಆಟೋ ಚಾಲಕನ ಕೈ ಮುರಿದಿದೆ.
Advertisement
ಅದೃಷ್ಟವಶಾತ್ ಆಟೋ ಹಾಗೂ ಕಾರಿನಲ್ಲಿದ್ದವರು ಜೀವಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡ ಚಾಲಕ ತರೀಕೆರೆ ತಾಲೂಕಿನ ಗೇರಮರಡಿ ಮೂಲದವರು ಎಂದು ತಿಳಿದು ಬಂದಿದೆ. ಅದೃಷ್ಟ ಎಂಬಂತೆ ಎರಡೂ ವಾಹನದಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.