ಹಾಸನ: ರಾಜ್ಯದಲ್ಲಿ ಗಾಳಿ-ಮಳೆಯ ಅಬ್ಬರ ಮುಂದುವರಿದಿದೆ. ಭಾರೀ ಮಳೆಯ ಪರಿಣಾಮ ಬೃಹತ್ ಗಾತ್ರದ ಮರ ಹಾಸನ ನಗರದ ಸಂಗಮೇಶ್ವರ ಬಡಾವಣೆಯಲ್ಲಿರುವ ಜವೇನಹಳ್ಳಿ ಮಠದ ಮೇಲೆ ಬಿದ್ದಿದೆ. ಮರ ಬಿದ್ದ ಪರಿಣಾಮ ಮಠದ ಕಟ್ಟಡ ಹಾಗೂ ದೇಗುಲಕ್ಕೆ ಹಾನಿಯಾಗಿದೆ.
ಮಠದಲ್ಲಿ ಯಾರೂ ಇಲ್ಲದಿದ್ದರಿಂದ ಭಾರಿ ಅನಾಹುತ ತಪ್ಪಿದೆ. ಹಳೆಯ ಮಠ ಮಳೆಗಾಲದಲ್ಲಿ ಸೋರುತ್ತಿದ್ದರಿಂದ ಮಠದ ಪೀಠಾಧ್ಯಕ್ಷ ಶ್ರೀ ಸಂಗಮೇಶ್ವರ ಸ್ವಾಮೀಜಿ ಬೇರೆಡೆ ತಂಗುತ್ತಿದ್ದರು. ಸದ್ಯ 700 ವರ್ಷ ಹಳೆಯದಾದ ಜವೇನಹಳ್ಳಿ ಮಠ ದುರಸ್ತಿ ಮಾಡುವಂತೆ ಭಕ್ತಾಧಿಗಳು ಆಗ್ರಹಿಸಿದ್ದಾರೆ.



