ಬೆಂಗಳೂರು:- ನಗರದ ಪ್ರತಿಷ್ಟಿತ ಫ್ಲೈ ಓವರ್ ಕೆಳಗೆ ಬೃಹತ್ ಗಾತ್ರದ ಟ್ರಕ್ ಸಿಲುಕಿಕೊಂಡಿರುವ ಘಟನೆ ಜರುಗಿದೆ.
Advertisement
ಯಶವಂತಪುರ ಫ್ಲೈ ಓವರ್ ನಲ್ಲಿ ಘಟನೆ ಸಂಭವಿಸಿದ್ದು, ಎತ್ತರ ಮಿತಿ ಅರಿಯದೇ ಚಲಾಯಿಸಿದ್ದರಿಂದ ಫ್ಲೈ ಓವರ್ ಕೆಳಭಾಗದಲ್ಲಿ ಟ್ರಕ್ ಸಿಕ್ಕಿ ಹಾಕಿಕೊಂಡಿದೆ. ಟ್ರಕ್ ಹೊರ ತೆಗೆಸಲು ಟ್ರಾಫಿಕ್ ಪೊಲೀಸರು ಈಗ ಹರಸಾಹಸ ಪಡುತ್ತಿದ್ದಾರೆ. ಸ್ಥಳಕ್ಕೆ ಕ್ರೇನ್ ಕರೆಸಿ ಟ್ರಕ್ ಹೊರಗೆ ತೆಗೆಯಲು ಪೊಲೀಸರು ಪ್ರಯತ್ನ ನಡೆಸುತ್ತಿದ್ದಾರೆ.
ಟ್ರಕ್ ಚಾಲಕನ ಅಜಾಗರೂಕತೆ ಚಾಲನೆಯಿಂದ ವಾಹನ ಸವಾರರು ಕಿರಿಕಿರಿ ಅನುಭವಿಸುವಂತಾಗಿದೆ ಎಂದು ತಿಳಿದು ಬಂದಿದೆ.