ಲಂಚ ಕೊಟ್ರೂ ಆಗದ ಕೆಲಸ: ಪಿಡಿಒ ಬೆನ್ನು ಬಿದ್ದ ಗ್ರಾಪಂ ಸದಸ್ಯ!

0
Spread the love

ಮಂಡ್ಯ : ಸಕ್ಕರೆ ನಾಡು ಮಂಡ್ಯದಲ್ಲಿ ದಲ್ಲಿ ಸರ್ಕಾರಿ ಅಧಿಕಾರಿಗೆ ಕೊಟ್ಟ ಲಂಚದ ಹಣವನ್ನು ವಾಪಸ್ ಕೊಡುವಂತೆ ವ್ಯಕ್ತಿಯೊಬ್ಬ ಅಧಿಕಾರಿಯ ಹಿಂದೆ ಬಿದ್ದಿರೋ ಘಟನೆ ನಡೆದಿದೆ. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಮಂದೆಗೆರೆ ಗ್ರಾಮದಲ್ಲಿ ಘಟನೆ ನಡೆದಿದ್ದು,

Advertisement

ಉದ್ಯೋಗ ಖಾತ್ರಿ ಬಿಲ್ ಪಾವತಿಗೆ ಗ್ರಾ.ಪಂ ಸದಸ್ಯ ಜಗದೀಶ್ ಎಂಬವರು ಪಿಡಿಒ ಸುವರ್ಣ ಎಂಬವರಿಗೆ 15 ಸಾವಿರ ರೂ. ಲಂಚ ಕೊಟ್ಟಿದ್ದರು ಎನ್ನಲಾಗಿದೆ. ಲಂಚ ಕೊಟ್ಟ ಹಣವನ್ನು ವಾಪಸ್ ಕೊಡಿ ಎಂದು ವ್ಯಕ್ತಿಯೊಬ್ಬರು ಪಿಡಿಒ ಬೆನ್ನು ಬಿದ್ದ ವಿಡಿಯೋ ವೈರಲ್ ಇದೀಗ ಎಲ್ಲೆಡೆ ವೈರಲ್ ಆಗಿದೆ.

ಲಂಚ ಕೊಟ್ಟ ಬಳಿಕವೂ ಕೆಲಸ ಆಗಿಲ್ಲ ಎಂದು ಜಗದೀಶ್ ನಡುರಸ್ತೆಯಲ್ಲಿ ಪಿಡಿಒರನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೆ, ವಿಡಿಯೋ ಸಹ ರೆಕಾರ್ಡ್ ಮಾಡಿದ್ದಾರೆ. ಮತ್ತೊಂದೆಡೆ, ಹಣಕ್ಕೆ ಬಿಗಿಪಟ್ಟು ಹಿಡಿದ ಸದಸ್ಯ ಕೂಡ ಕಾಮಗಾರಿಯಲ್ಲಿ ಅಕ್ರಮ ಎಸಗಿರುವ ಶಂಕೆ ವ್ಯಕ್ತವಾಗಿದೆ. ಮತ್ತೊಂದೆಡೆ ಲಂಚ ಪಡೆದ ಆರೋಪವನ್ನು ಪಿಡಿಒಸುವರ್ಣಅಲ್ಲಗಳೆದಿದ್ದಾರೆ. ಸೋಷಿಯಲ್ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗೆ ನೆಟ್ಟಿಗರು ಕಮೆಂಟ್ಸ್ ಸುರಿಮಳೆಗೈದಿದ್ದಾರೆ.


Spread the love

LEAVE A REPLY

Please enter your comment!
Please enter your name here