ಬೆಂಗಳೂರು: ಸಿದ್ದರಾಮಯ್ಯ ಸುತ್ತ ಒಂದು ರೀತಿ ಟಿಪ್ಪು ಗ್ಯಾಂಗ್ ಸುತ್ತುವರೆದಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು,
ಪ್ರತಿದಿನ ಒಂದು ಲಕ್ಷ ಕೇಸ್ ಬರುತ್ತವೆ. ಸದನದಲ್ಲಿ ನಾವು ಗಲಾಟೆ ಮಾಡಿದ್ರು ನೀವುಗಳು ಎಸ್‌ಐಟಿ ರಚನೆ ಮಾಡಲ್ಲ. ಆದರೆ ಈ ವಿಚಾರವಾಗಿ ಅಷ್ಟು ಬೇಗ ಎಸ್‌ಐಟಿ ರಚನೆ ಮಾಡಿದ್ರಿ. ಕಾರಣ, ಸಿದ್ದರಾಮಯ್ಯ ಸುತ್ತ ಒಂದು ರೀತಿ ಟಿಪ್ಪು ಗ್ಯಾಂಗ್ ಸುತ್ತುವರೆದಿದೆ ಎಂದು ಕಿಡಿಕಾರಿದ್ದಾರೆ.
ಇನ್ನೂ ಧರ್ಮಸ್ಥಳ ಪ್ರಕರಣ ಸಂಬಂಧ ಡಿಕೆಶಿ ಅವರು ಷಡ್ಯಂತ್ರ ಅಂತಾ ಹೇಳಿದ್ದಾರೆ. ಡಿಕೆಶಿ ಹೇಳಿದ್ದಾರೆ ಎಂದು ಸರ್ಕಾರ ಒಪ್ಪಿಕೊಂಡಿದೆ. ನಾನು ಸದನದಲ್ಲಿ ಡಿಮ್ಯಾಂಡ್ ಮಾಡ್ತೇನೆ.
ಎಸ್‌ಐಟಿಯ ಮಧ್ಯಂತರ ವರದಿ ಬಿಡುಗಡೆ ಮಾಡಬೇಕು. ಆ ಷಡ್ಯಂತ್ರ ಮಾಡಿದ್ದು ಯಾರು ಅಂತ ಹೇಳಬೇಕು. ಇಲ್ಲ ಅಂದರೆ ನಾವು ಸದನದಲ್ಲಿ ಗಲಾಟೆ ಮಾಡುತ್ತೇವೆ. ಆ ಅನಾಮಿಕ ಹುಚ್ಚನಾ ಅಂತಾ ನೋಡಬೇಕಿತ್ತು. ಸುಮ್ಮನೇ ಎಸ್‌ಐಟಿ ತನಿಖೆ ಮಾಡೋದಲ್ಲ ಎಂದಿದ್ದಾರೆ.