ರಾಮನಗರ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಮತ ಎಣಿಕೆ ನಡೆದಿದ್ದು, ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ 25357 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ತನ್ನ ರಾಜಕೀಯ ಇತಿಹಾಸದಲ್ಲೇ ದಾಖಲೆ ಮತಗಳನ್ನು ಸಿಪಿವೈ ಈ ಬಾರಿ ಪಡೆದಿದ್ದಾರೆ. ಈ ಹಿಂದೆ 5 ಬಾರಿ ಗೆದ್ದರೂ ಸಹ 85 ಸಾವಿರ ಮತಗಳನ್ನು ದಾಟಿರಲಿಲ್ಲ. ಆದರೆ ಈ ಬಾರಿ ಕಾಂಗ್ರೆಸ್‌ಗೆ ಸೇರಿದ ಬಳಿಕ ಲಕ್ಷಕ್ಕೂ ಅಧಿಕ ಮತಗಳ ಪಡೆದು ದಾಖಲೆ ನಿರ್ಮಿಸಿದ್ದಾರೆ.
ಸದ್ಯ ಎಲ್ಲ ಸುತ್ತಿನ ಮತ ಎಣಿಕೆ ಮುಗಿದಿದ್ದು ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ಅವರು ಗೆಲುವು ಪಡೆದಿದ್ದಾರೆ. 15ನೇ ಸುತ್ತಿನ ವೇಳೆ ಯೋಗೇಶ್ವರ್ ಅವರು 89,714 ಮತಗಳನ್ನು ಪಡೆದಿದ್ರೆ, ಇತ್ತ ನಿಖಿಲ್ ಅವರು ಕೇವಲ 64,688 ವೋಟ್ ಪಡೆದಿದ್ದರು. ಈ ಮೂಲಕ ಯೋಗೇಶ್ವರ್ ಅವರು 25,026 ಮತಗಳು ಮುನ್ನಡೆಯಲ್ಲಿದ್ದವರು ಕೊನೆವರೆಗೂ ಸತತ ಮುನ್ನಡೆಯಲ್ಲಿದ್ದರು. ನಿಖಿಲ್ ಮೊದಲು ಮುನ್ನಡೆ ಕಾಯ್ದುಕೊಂಡವರು ನಂತರ ಹಿನ್ನಡೆಗೆ ಬಂದರು.