ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ತಾಲೂಕಿನ ಒಡೆಯರ ಮಲ್ಲಾಪುರ ಮೊರಾರ್ಜಿ ವಸತಿ ಶಾಲೆಗೆ ಅಮೇಜಾನ್ ಸಂಸ್ಥೆಯವರು, ಭವಿಷ್ಯದ ಅಭಿಯಂತರರು ಹಾಗೂ ಕಲಿಕಾ ಪೂರಕ ಬುನಾದಿ ಕಾರ್ಯಕ್ರಮದಡಿ 5 ಲ್ಯಾಪ್‌ಟಾಪ್ ಮತ್ತು ಬ್ಯಾಗ್ ನೀಡಿದೆ.
ಅಮೇಜಾನ್ ಸಂಸ್ಥೆಯು ಇತ್ತೀಚೆಗೆ ಬೆಂಗಳೂರಿನಲ್ಲಿ ಮೂರು ದಿನಗಳ ಕಾಲ ನಡೆಸಿದ ಕಾರ್ಯಕ್ರಮದ ನಿರ್ಣಾಯಕರಾಗಿ ವಿದೇಶದ ಸಂಪನ್ಮೂಲ ವ್ಯಕ್ತಿಗಳು ಆಗಮಿಸಿದ್ದರು. ಈ ವೇಳೆ ರಾಜ್ಯದ 5 ವಿಶೇಷ ಶಾಲೆಗಳನ್ನು ಆಯ್ಕೆ ಮಾಡಿದ್ದು, ಅದರಲ್ಲಿ ಒಡೆಯರ ಮಲ್ಲಾಪುರ ವಸತಿ ಶಾಲೆಯೂ ಒಂದಾಗಿತ್ತು. ಈ ಶಾಲೆಯ ಮಕ್ಕಳ ಉಪಯೋಗಕ್ಕಾಗಿ 5 ಲ್ಯಾಪ್‌ಟಾಪ್‌ಗಳನ್ನು ವಿತರಿಸಿದರು.
ಈ ಕಾರ್ಯಕ್ರಮದ ನಿರ್ವಾಹಕರಾಗಿ ಶಾಲೆಯ ಕಂಪ್ಯೂಟರ್ ಶಿಕ್ಷಕ ಸನಾವುಲ್ಲಾ ಮುಲ್ಲಾರವರ ಕಾರ್ಯನಿರ್ವಹಿಸಿದ್ದರು. ಈ ವಿಶೇಷ ಗೌರವಕ್ಕೆ ಪಾತ್ರವಾದ ಶಾಲೆ ಮತ್ತು ವಿದ್ಯಾರ್ಥಿಗಳನ್ನು ಸಮಾಜ ಕಲ್ಯಾಣ ಇಲಾಖೆ, ಕ್ರೈಸ್ ವಸತಿ ಶಾಲೆಗಳ ಜಿಲ್ಲಾ ಸಮನ್ವಯ ಅಧಿಕಾರಿಗಳು, ಪ್ರಾಂಶುಪಾಲರು, ಶಿಕ್ಷಕರು ಸಿಬ್ಬಂದಿ ವರ್ಗದವರು ಒಡೆಯರ ಮಲ್ಲಾಪುರ ಗ್ರಾಮದ ಹಿರಿಯರು ಅಭಿನಂದಿಸಿದ್ದಾರೆ.