ಮಂಡ್ಯ: ಜಮೀನಿನಲ್ಲಿ ಕುರಿ ಮೇಯಿಸುತ್ತಿದ್ದ ವೇಳೆ ರೈತನ ಮೇಲೆ ಚಿರತೆಯೊಂದು ದಾಳಿ ಮಾಡಿದ್ದು, ರೈತ ಮೊಘಣ್ಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಅಡಗನಹಳ್ಳಿ ಗ್ರಾಮದ ರೈತ ಮೊಘಣ್ಣ (40) ದಾಳಿಗೆ ಒಳಗಾಗಿರುವ ವ್ಯಕ್ತಿಯಾಗಿದ್ದಾರೆ. ರೈತ ಮೊಘಣ್ಣ ಇಂದು ಬೆಳಿಗ್ಗೆ ತಮ್ಮ ಜಮೀನಿನಲ್ಲಿ ಕುರಿ ಮೇಯಿಸುವ ವೇಳೆ ಚಿರತೆಯೊಂದು ಕುರಿ ಮಂದೆ ಮೇಲೆ ಏಕಾಏಕಿ ದಾಳಿ ಮಾಡಿ ಕುರಿ ಮರಿಯೊಂದನ್ನು ಎತ್ತೋಯ್ಯುವ ವೇಳೆ ಅದನ್ನು ಬಿಡಿಸಿಕೊಳ್ಳಲು ರೈತ ಮೊಘಣ್ಣ ಯತ್ನಿಸಿದ್ದಾರೆ.
ಆದರೆ, ಚಿರತೆ ಕುರಿ ಮರಿ ಬಿಟ್ಟು ರೈತ ಮೊಘಣ್ಣ ಮೇಲೆ ದಾಳಿ ಮಾಡಿ ಕಿವಿ ಮತ್ತು ದೇಹದ ವಿವಿಧ ಭಾಗಗಳಲ್ಲಿ ಚಿರತೆ ಗಾಯಗೊಳಿಸಿ ಪರಾರಿಯಾಗಿದ್ದು, ರೈತ ಮೊಘಣ್ಣಗೆ ಕೆಸ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.



