ವಿಜಯನಗರ: ವಾಯು ವಿಹಾರ ಮಾಡುತ್ತಿದ್ದವರ ಮೇಲೆ ಲಾರಿ ಹರಿದು ಇಬ್ಬರು ಸಾವನ್ನಪ್ಪಿರುವ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಆಲೂರು ರಾಹೆ 50 ರಲ್ಲಿ ನಡೆದಿದೆ.
Advertisement
ಆಲೂರು ಗ್ರಾಮದ ಸಿದ್ದಲಿಂಗಯ್ಯ (39) ಮೊಳಕಾಲ್ಮೂರು ತಾಲೂಕಿನ ದೇವಸಮುದ್ರದ ಕೊಟ್ರಯ್ಯ(26) ಮೃತಪಟ್ಟ ದುರ್ದೈವಿಗಳು ಆಗಿದ್ದು, ಮತ್ತೊಬ್ಬ ಹುಡೇಂ ಗ್ರಾಮದ ಶಿವಕುಮಾರ್ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರಿನಿಂದ ರಾಜಸ್ಥಾನದ ಕಡೆ ಹೊರಟಿದ್ದ ಲಾರಿ ಆಲೂರು ಗ್ರಾಮದ ರಾಹೆ.50 ರ ಬಳಿ ವಾಕಿಂಗ್ ಮಾಡುತ್ತಿದ್ದ ಮೂವರ ಮೇಲೆ ಹರಿದಿದೆ. ಇನ್ನೂ ಘಟನೆ ಸಂಬಂಧ ಕಾನಾಹೊಸಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.