ಬೆಳಗಾವಿ:- ಜಿಲ್ಲೆಯ ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ವಿವಾಹಿತ ಪ್ರೇಯಸಿಗೆ 9 ಬಾರಿ ಚಾಕುವಿನಿಂದ ಇರಿದು ಕೊಂದ ಬಳಿಕ ಪಾಗಲ್ ಪ್ರೇಮಿ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜರುಗಿದೆ.
29 ವರ್ಷದ ರೇಷ್ಮಾ, 31 ವರ್ಷದ ಆನಂದ ಸತಾರ್ ಮೃತ ಪ್ರೇಮಿಗಳು. ಆನಂದ ಮೂರು ಮಕ್ಕಳ ತಂದೆಯಾಗಿದ್ದರೆ, ರೇಷ್ಮಾ 2 ಮಕ್ಕಳ ತಾಯಿಯಾಗಿದ್ದಳು. ಪಾಗಲ್ ಪ್ರೇಮಿ ಆನಂದ ಮದ್ವೆ ಬಳಿಕವೂ ವಿವಾಹಿತೆ ರೇಷ್ಮಾ ಜೊತೆಗೆ ಅನೈತಿಕ ಸಂಬಂದ ಹೊಂದಿದ್ದ. ನನ್ನ ಹೆಂಡ್ತಿಯಂತೆ ನೀನೂ ನನ್ನ ಮಾತು ಕೇಳಬೇಕು ಅಂತ ಆಕೆಯನ್ನ ಪೀಡಿಸುತ್ತಲೇ ಇದ್ದ. ಇದೀಗ ಪ್ರೇಯಸಿಯನ್ನ 9 ಬಾರಿ ಇರಿದು ಕೊಂದಿದ್ದಾನೆ. ಆಕೆ ಸಾವನಪ್ಪುತ್ತಿದ್ದಂತೆ ಭಯಗೊಂಡು ತಾನೂ ಅದೇ ಚಾಕುವಿನಿಂದ ಚುಚ್ಚಿಕೊಂಡಿದ್ದಾನೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಆನಂದನನ್ನ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೂ ಚಿಕಿತ್ಸೆ ಫಲಕಾರಿಯಾಗದೇ ಖಾಸಗಿ ಆಸ್ಪತ್ರೆಯಲ್ಲಿ ಆನಂದ ಸಾವನ್ನಪ್ಪಿದ್ದಾನೆ.
ಘಟನೆ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.