ಕಚ್ಚಿದ ಹಾವಿನ ತಲೆ ಜಜ್ಜಿ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ವ್ಯಕ್ತಿ!

0
Spread the love

ಹುಬ್ಬಳ್ಳಿ:- ತಾಲೂಕಿನ ಇಂಗಳಗಿ ಗ್ರಾಮದಲ್ಲಿ ಯುವಕನೋರ್ವ ತನಗೆ ಕಚ್ಚಿದ ಹಾವಿನ ತಲೆ ಜಜ್ಜಿ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಘಟನೆ ಜರುಗಿದೆ.

Advertisement

ನಿನ್ನೆ ಸಂಜೆ 5 ಗಂಟೆ ಸುಮಾರಿಗೆ ಫಕ್ಕೀರಪ್ಪ ಅಣ್ಣಿಗೇರಿ ಎಂಬ ಯುವಕ ತನ್ನ ತಂದೆ ಜೊತೆ ಶೇಂಗಾ ಕೀಳಲು ಹೋಗಿದ್ದ. ಈ ವೇಳೆ ಫಕ್ಕೀರಪ್ಪ ಅಣ್ಣಿಗೇರಿ ಅವರಿಗೆ ಹಾವು ಕಚ್ಚಿದೆ.

ಫಕ್ಕೀರಪ್ಪ ಹಾವು ಕಚ್ಚಿದ ಕೂಡಲೇ ಹಾವಿನ ತಲೆ ಜಜ್ಜಿ ಕೊಂದಿದ್ದಾನೆ. ನಂತರ ತಂದೆ ಈರಪ್ಪನ ಜೊತೆ ಆಸ್ಪತ್ರೆಗೆ ಬಂದು ಅಡ್ಮಿಟ್ ಆಗಿದ್ದಾನೆ. ವೈದ್ಯರಿಗೆ ಹಾವನ್ನ ತೋರಿಸಿ, ಇದೆ ಹಾವು ಕಚ್ಚಿದೆ ಎಂದು ಆಸ್ಪತ್ರೆಗೆ ದಾಖಲಾಗಿದ್ದಾನೆ. ಸದ್ಯ ಯುವಕನನ್ನು ವೈದ್ಯರು ದಾಖಲಿಸಿಕೊಂಡು ಚಿಕಿತ್ಸೆ ಕೊಡಿಸುತ್ತಿದ್ದಾರೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.


Spread the love

LEAVE A REPLY

Please enter your comment!
Please enter your name here