ಆಸ್ಪತ್ರೆ ಮಹಡಿಯಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ!

0
Spread the love

ಆನೇಕಲ್: ಆಸ್ಪತ್ರೆ ಮಹಡಿಯಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

Advertisement

ಜಿಗಣಿ ನಿವಾಸಿ ಮುನಿಯಲ್ಲಪ್ಪ(46) ಮೃತ ವ್ಯಕ್ತಿಯಾಗಿದ್ದು, ಕೆಲ ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಮುನಿಯಲ್ಲಪ್ಪ ಕಳೆದ 16 ನೇ ತಾರೀಖಿನಂದು ಆಸ್ಪತ್ರೆಗೆ ಬಂದು ಅಸ್ತಮಾ, ಹೊಟ್ಟೆನೋವು, ಫೀವರ್ ಎಂದು ಅಡ್ಮಿಟ್ ಆಗಿದ್ದನು.

ಇದಾದ ಬಳಿಕ ಇಂದು ಮತ್ತೆ ಆಸ್ಪತ್ರೆಗೆ ಬಂದಿದ್ದನು. ಆದ್ರೆ ಆಸ್ಪತ್ರೆಯ ಎರಡನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆಸ್ಪತ್ರೆ ಬಿಲ್ಡಿಂಗ್ ನ ಸಜ್ಜದ ಮೇಲೆ ಬಿದ್ದಿದ್ದ ಮೃತದೇಹ, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಸ್ಥಳಕ್ಕೆ ಆನೇಕಲ್ ಪೊಲೀಸರ ಭೇಟಿ ನೀಡಿ ಪರೀಶೀಲನೆ ನಡೆಸಿದರು. ನಂತರ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.


Spread the love

LEAVE A REPLY

Please enter your comment!
Please enter your name here