ಮಂಡ್ಯ: ಸಕ್ಕರೆನಾಡು ಮಂಡ್ಯದಲ್ಲಿ ಹೃದಯಾಘಾತಕ್ಕೆ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಕೆ.ಆರ್.ಪೇಟೆ ತಾಲೂಕಿನ ಹೊಸಹೊಳಲು ಗ್ರಾಮದಲ್ಲಿ ನಡೆದಿದೆ. ಹೊಸಹೊಳಲು ಗ್ರಾಮದ ನಿವಾಸಿ ಶಿವಚಾರಿ (48) ಹೃದಯಾಘಾತಕ್ಕೆ ಬಲಿಯಾದ ವ್ಯಕ್ತಿಯಾಗಿದ್ದು,
Advertisement
ಕೆಲಸ ಮುಗಿಸಿ ಮನೆಗೆ ಬಂದ ಶಿವಚಾರಿಗೆ ರಾತ್ರಿ ಏಕಾಏಕಿ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಚಿಕಿತ್ಸೆಗಾಗಿ ಕುಟುಂಬಸ್ಥರು ಕೆ.ಆರ್.ಪೇಟೆ ತಾಲೂಕು ಆಸ್ಪತ್ರೆಗೆ ರವಾನೆ ಮಾಡಿದ್ದರು.
ಆದ್ರೆ ಚಿಕಿತ್ಸೆ ಫಲಿಸದೆ ಹಠಾತ್ ಹೃದಯಾಘಾತದಿಂದ ಶಿವಚಾರಿ ಸಾವನ್ನಪ್ಪಿದ್ದಾರೆ. ಹೃದಯಾಘಾತದಿಂದಲೇ ಶಿವಾಚಾರಿ ಸಾವು ಎಂದು ವೈದ್ಯರಿಂದ ದೃಢಪಡಿಸಲಾಗಿದ್ದು, ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.