ರಾಮನಗರ: ರಸ್ತೆ ಮೇಲೆ ಜಲ್ಲಿಕಲ್ಲು ಹಾಕಿದ್ದಕ್ಕೆ ಮಹಿಳೆಯ ಮೇಲೆ ವ್ಯಕ್ತಿಯೋರ್ವ ಅವಾಚ್ಯ ಶಬ್ದಗಳಿಂದ ನಿಂದಿಸಿ ಮನಬಂದಂತೆ ಹಲ್ಲೆ ಮಾಡಿರುವ ಘಟನೆ ರಾಮನಗರದ ವಿಜಯನಗರದಲ್ಲಿ ನಡೆದಿದೆ. ಮಹದೇವಮ್ಮ ಎಂಬುವವರಿಗೆ ಕಿರಣ್ ಸಾಗರ್ ಎಂಬಾತನಿಂದ ಹಲ್ಲೆ ಮಾಡಲಾಗಿದ್ದು,
Advertisement
ಮಹದೇವಮ್ಮ ಅವರು ಮನೆಯ ಮೇಲ್ಭಾಗದ ಕಟ್ಟಡಕ್ಕೆ ಮೋಲ್ಡ್ ಹಾಕಲು ಜಲ್ಲಿ ತರಿಸಿದ್ದರು. ಹೀಗಾಗಿ ಮನೆಯ ಮುಂದೆ ರಸ್ತೆಯ ಮೇಲೆ ಜಲ್ಲಿ ಸುರಿಸಿದ್ದರು. ಇದರಿಂದಾಗಿ ರಸ್ತೆಯಲ್ಲಿ ಸಂಚಾರಿಸಲು ಅಡ್ಡವಾಗುತ್ತದೆ ಎಂದು ಮಹಿಳೆಯ ಮೇಲೆ ಹಲ್ಲೆ ಮಾಡಿದ್ದು,
ಆನಂತರ ಮನೆಯ ಮೇಲೆ ಇಟ್ಟಿಗೆ ಎಸೆದಿದ್ದಾನೆ. ಇನ್ನೂ ಕಿರಣ್ ಸಾಗರ್ ಹಲ್ಲೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈ ಸಂಬಂಧ ರಾಮನಗರದ ಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.