ವಿಜಯಪುರ:- ನಗರದ ಮಹಾನಗರ ಪಾಲಿಕೆಯ ಬಳಿ ಕುಡಿದ ನಶೆಯಲ್ಲಿ ವ್ಯಕ್ತಿಯೊಬ್ಬ ತನ್ನ ಗೆಳೆಯನನ್ನೇ ಹತ್ಯೆಗೈದ ಘಟನೆ ಜರುಗಿದೆ.
35 ವರ್ಷದ ಸಮೀರ ಬಡಿಗರ್ ಹತ್ಯೆಯಾಗಿರುವ ದುರ್ದೈವಿ ಎನ್ನಲಾಗಿದೆ. ಗೆಳೆಯ ವಿನಯ ಎಂಬಾತನಿಂದ ಹತ್ಯೆ ನಡೆದಿದೆ. ಕುಡಿದ ನಶೆಯಲ್ಲಿ ಸಮೀರ ದೇಹಕ್ಕೆ ಏಳಕ್ಕಿಂತ ಹೆಚ್ಚು ಬಾರಿ ಚಾಕುವಿನಿಂದ ಹಲ್ಲೆಗೈದು ಹತ್ಯೆ ಮಾಡಿದ್ದಾನೆ.
ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.



