ಗದಗ: ರೋಣ ತಾಲೂಕಿನಲ್ಲಿ ರಾತ್ರಿ ಭಾರಿ ಮಳೆ ಹಿನ್ನೆಲೆ ತುಂಬಿ ಹರಿಯುತ್ತಿರೋ ಹಳ್ಳದಲ್ಲಿ ಕೊಚ್ಚಿ ಹೋದ ವ್ಯಕ್ತಿ ಪವಾಡ ಸದೃಶ ಬಚಾವ್ ಆದ ಗದಗ ಜಿಲ್ಲೆಯ ರೋಣ ತಾಲೂಕಿನ ದ್ಯಾಮುಣಸಿ ಗ್ರಾಮದಲ್ಲಿ ಘಟನೆ ನಡೆದಿದೆ.
Advertisement
ಯಲ್ಲಪ್ಪ ಮಾರನಬಸರಿ (50) ಪ್ರಾಣಾಪಾಯದಿಂದ ಪಾರಾಗಿರುವ ವ್ಯಕ್ತಿಯಾಗಿದ್ದು,. ಭಾರಿ ದುರಂತ ತಪ್ಪಿದೆ. ರೋಣ ತಾಲೂಕಿನಲ್ಲಿ ನಿನ್ನೆ ರಾತ್ರಿ ಭಾರಿ ಮಳೆ ಸುರಿದಿದೆ.
ಪರಿಣಾಮ ಹಳ್ಳಗಳು ಉಕ್ಕಿ ಹರಿಯುತ್ತಿವೆ. ಈ ವೇಳೆ ಯಲ್ಲಪ್ಪ ಮಾರನಬಸರಿ ಹಳ್ಳ ದಾಟಲು ಹೋಗಿದ್ದಾರೆ. ಆಗ ಅನಾಹುತ ನಡೆದಿದೆ. ಇತ್ತ ಯಲ್ಲಪ್ಪ ಮಾರನಬಸರಿ ಕೊಚ್ಚಿ ಹೋಗುತ್ತಿದ್ದಂತೆ ಹಳ್ಳದ ದಡದಲ್ಲಿ ಇದ್ದ ಗ್ರಾಮಸ್ಥರಿಂದ ರಕ್ಷಣೆ ಮಾಡಿ ಟ್ರ್ಯಾಕ್ಟರ್ ಮೂಲಕ ದಡಕ್ಕೆ ಕರೆದುಕೊಂಡು ಬಂದಿದ್ದಾರೆ.
ವ್ಯಕ್ತಿ ಕೊಚ್ಚಿ ಹೋಗುತ್ತಿದ್ದ ವಿಡಿಯೋ ನೋಡಿದರೆ ಮೈ ಜುಮ್ ಎನ್ನಿಸುತ್ತದೆ. ಸೇತುವೆ ಮೇಲ್ದರ್ಜೆಗೆ ಏರಿಸುವಂತೆ ಗ್ರಾಮಸ್ಥರಿಂದ ಒತ್ತಾಯಿಸಲಾಗಿದೆ.