ವಿಜಯಸಾಕ್ಷಿ ಸುದ್ದಿ, ಗದಗ: ಇನ್ನರ್ ವ್ಹೀಲ್ ಕ್ಲಬ್‌ನ ಮೂಲ ಧ್ಯೇಯವಾದ ಸ್ನೇಹ ಮತ್ತು ಸೇವೆಯನ್ನು ಸಾರ್ಥಕವಾಗಿ ನಿಭಾಯಿಸುತ್ತಿರುವ ಇನ್ನರ್ ವ್ಹೀಲ್ ಕ್ಲಬ್ ಗದಗ-ಬೆಟಗೇರಿ ಉತ್ತಮ ಮಾದರಿಯಾಗಿದೆ. ಎಲ್ಲಿ ಯಾವಾಗ ಅವಶ್ಯಕತೆ ಇದೆಯೋ, ಅಲ್ಲಿ ಉಪಸ್ಥಿತವಿರುವ ಇನ್ನರ್ ವ್ಹೀಲ್ ಕ್ಲಬ್ ಗದಗ-ಬೆಟಗೇರಿಯ ಸಮಯ ಪ್ರಜ್ಞೆ ಪ್ರಶಂಸನೀಯವಾದದ್ದು ಎಂದು ಇನ್ನರ್ ವ್ಹೀಲ್ ಕ್ಲಬ್ ಡಿಸ್ಟ್ರಿಕ್ 317ನ ಡಿಸ್ಟ್ರಿಕ್ ಚೇರಮನ್ ಉತ್ಕರ್ಷಾ ಪಾಟೀಲ್ ಪ್ರಶಂಸೆ ವ್ಯಕ್ತಪಡಿಸಿದರು.
ರೋಟರಿ ಕ್ಲಬ್ ಗದಗ-ಬೆಟಗೇರಿಯಲ್ಲಿ ನಡೆದ ಇನ್ನರ್ ವ್ಹೀಲ್ ಕ್ಲಬ್‌ನ ಅಧಿಕೃತ ಭೇಟಿಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ವರ್ಣ ಸಂಭ್ರಮವನ್ನು ಆಚರಿಸಿಕೊಂಡ ಇನ್ನರ್ ವ್ಹೀಲ್ ಕ್ಲಬ್ ಗದಗ-ಬೆಟಗೇರಿಯ ಕಾರ್ಯಗಳು ಹಾಗೂ ಅವರ ಪರಿಶ್ರಮ ಶ್ಲಾಘನೀಯವಾದದ್ದು ಎಂದರಲ್ಲದೆ, 2025-26ನೇ ಸಾಲಿನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ದಾಖಲೆಗಳನ್ನು ಪರಿಶೀಲಿಸಿ ಅವರ ನಿಷ್ಠೆ ಹಾಗೂ ಸಮರ್ಪಣಾ ಭಾವವನ್ನು ಮೆಚ್ಚಿ ಭವಿಷ್ಯದಲ್ಲಿ ಕೈಗೊಳ್ಳಬೇಕಾದ ಚಟುವಟಿಕೆಗಳು ಹಾಗೂ ಯೋಜನೆಗಳ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ನೀಡಿದರು.
ಕ್ಲಬ್‌ನ ಅಧ್ಯಕ್ಷರಾದ ಅಶ್ವಿನಿ ಜಗತಾಪ ಸ್ವಾಗತಿಸಿದರು. ಪವಿತ್ರಾ ಬಿರಾದರ್ ಇನ್ನರ್ ವ್ಹೀಲ್ ಪ್ರಾರ್ಥನೆಯನ್ನು ಮಾಡಿದರು, ದೀಪಾ ಪಟ್ಟಣಶೆಟ್ಟಿ ಡಿಸಿ ಉತ್ಕರ್ಷಾ ಪಾಟೀಲ್ ಅವರ ಪರಿಚಯವನ್ನು ನೀಡಿದರು. ರೂಪಾ ಸಂಶೀಮಠ ಪಿ.ಡಿ.ಸಿ. ಪ್ರೇಮಾ ಗುಳಗೌಡರ್ ಇವರ ಪರಿಚಯವನ್ನು ಹಾಗೂ ಹೊಸ ಸದಸ್ಯರಾಗಿ ಸೇರಿಕೊಂಡ ಗೀತಾ ನಾಲ್ವಾಡ ಇವರ ಪರಿಚಯವನ್ನು ಸುವರ್ಣಾ ಮದ್ರಿಮಠ ಮಾಡಿದರು.
ಕಾರ್ಯದರ್ಶಿಗಳಾದ ಶಿವಲೀಲಾ ಅಕ್ಕಿ ಇನ್ನರ್ ವ್ಹೀಲ್ ಕ್ಲಬ್ ಗದಗ-ಬೆಟಗೇರಿಯಿಂದ ಇಲ್ಲಿಯವರೆಗೆ ಕೈಗೊಂಡ 2025-26ನೇ ಸಾಲಿನ ಪ್ರೊಜೆಕ್ಟ್ಗಳ ವಿವರವನ್ನು ನೀಡಿದರು. ಸಂಪಾದಕರಾದ ವೀಣಾ ಕಾವೇರಿ ಕಾರ್ಯಕ್ರಮದಲ್ಲಿ ಬಿಡುಗಡೆಯಾದ 2025-26ನೇ ಸಾಲಿನ ಬುಲೆಟಿನ್ ಬುಕ್ ಬಗ್ಗೆ ವಿವರಣೆಯನ್ನು ನೀಡಿದರು. ಮಾಜಿ ಅಧ್ಯಕ್ಷರಾದ ನೀಲಾಂಬಿಕಾ ಉಗಲಾಟ್ ಹಾಗೂ ಕೊ-ಸಿ.ಪಿ.ಸಿ.ಸಿ. ಶಿಲ್ಪಾ ಅಕ್ಕಿ ಕಾರ್ಯಕ್ರಮವನ್ನು ನಿರೂಪಿಸಿದರು.
ಈ ಸಂದರ್ಭದಲ್ಲಿ ಗದಗ-ಬೆಟಗೇರಿಯ ರೋಟರಿ, ರೋಟ್ರ‍್ಯಾಕ್ಸ್, ರೋಟರಿ ಸೆಂಟ್ರಲ್ ಹಾಗೂ ಇನ್ನರ್ ವ್ಹೀಲ್ ಕ್ಲಬ್ ಮಿಡ್‌ಟೌನ್‌ನ ಸದಸ್ಯರು ಹಾಗೂ ಇನ್ನರ್ ವ್ಹೀಲ್ ಕ್ಲಬ್ ಗದಗ-ಬೆಟಗೇರಿಯ ಸದಸ್ಯರು ಉಪಸ್ಥಿತರಿದ್ದರು.
ಇನ್ನರ್ ವ್ಹೀಲ್ ಕ್ಲಬ್ ಗದಗ-ಬೆಟಗೇರಿ ವತಿಯಿಂದ ಡಿಸಿ ಉತ್ಕರ್ಷಾ ಪಾಟೀಲ ಮಂಜು ಶಿಕ್ಷಣ ಸಂಸ್ಥೆ ಬೆಟಿಗೇರಿ-ಗದಗನ ಮಂಡ ಬುದ್ಧಿ ಮಕ್ಕಳ ವಸತಿ ವಿಶೇಷ ಶಾಲೆಯಲ್ಲಿ ವಾರ್ಷಿಕ ಕ್ರೀಡೆಗಳನ್ನು ಉದ್ಘಾಟಿಸಿ ದೇಣಿಗೆಯನ್ನು ನೀಡಿದರು. ಈ ಸಂದರ್ಭದಲ್ಲಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯ ನಿಟ್ಟಿನಲ್ಲಿ ಬಾಲಕಿಗೆ ಸೈಕಲ್‌ನ್ನು ಕ್ಲಬ್ ವತಿಯಿಂದ ವಿತರಿಸಲಾಯಿತು.



