ತುಮಕೂರು: ವರದಕ್ಷಿಣೆ ಬಂದಿಲ್ಲ ಅಂತ ಹೆಂಡತಿಯನ್ನೇ ಧನಪಿಶಾಚಿ ಪತಿ ಬಲಿ ಪಡೆದಿರುವ ಘಟನೆ ತುಮಕೂರು ನಗರದ ಎಸ್ಎಸ್ ಪುರಂ ನ ಮೂರನೇ ಕ್ರಾಸ್ ನಲ್ಲಿ ಜರುಗಿದೆ. ಸುಷ್ಮಿತಾ(23) ಮೃತ ದುರ್ದೈವಿ.. ನೇಣು ಬಿಗಿದ ಸ್ಥಿತಿಯಲ್ಲಿ ಸುಷ್ಮಿತಾ ಮೃತದೇಹ ಪತ್ತೆಯಾಗಿದೆ.
ಮದುವೆ ಆಗಿ ಕೇವಲ ಒಂದೂವರೆ ವರ್ಷ ಆಗಿತ್ತು. ಕೊರಟಗೆರೆ ತಾಲೂಕಿನ ಪುಟ್ಟಸಂದ್ರ ಗ್ರಾಮದ ಮೋಹನ್ ನಿತ್ಯ ಸೈಟು ಮತ್ತು ಹಣಕ್ಕಾಗಿ ಪೀಡಿಸುತ್ತಿದ್ದ ಎನ್ನಲಾಗಿದೆ. ಮಕ್ಕಳು ಆಗುತ್ತಿಲ್ಲ ಅಂತಾನು ಹಿಂಸೆ ಕೊಡುತ್ತಿದ್ದ ಎನ್ನಲಾಗಿದೆ. ಮೋಹನ,ಆತನ ತಂದೆ ಮತ್ತು ತಾಯಿ, ಮಾವ ನಟರಾಜು ಕೊಲೆ ಮಾಡಿ ನೇಣು ಹಾಕಿದ್ದಾರೆಂದು ಆರೋಪ ಮಾಡಲಾಗಿದೆ.
ಈ ಮುಂಚೆ ಹಲವು ಬಾರಿ ಮೋಹನ್ ಹಲ್ಲೆ ಮಾಡಿದ್ದ. ಕುಟುಂಬಸ್ಥರು ರಾಜಿ ಸಂದಾನ ಮಾಡಿದ್ದರು. ಆದರೂ ಕಿರುಕುಳ ಮುಂದುವರಿಸಿದ್ದಾನೆ. ಹೀಗಾಗಿ ಮಹಿಳೆ ನೇಣಿಗೆ ಕೊರಳೊಡ್ಡಿದ್ದಾನೆ. ನಿನ್ನೆ ಸಂಜೆ ಐದರಿಂದ ಆರು ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.



