ವಾಹನ ಸವಾರರು ನೋಡಲೇಬೇಕಾದ ಸ್ಟೋರಿ: ಜೀವ ಬಲಿಗಾಗಿ ಕಾಯುತ್ತಿವೆ ರಸ್ತೆ ಗುಂಡಿಗಳು!

0
Spread the love

ಬೆಂಗಳೂರು:- ವಾಹನ ಸವಾರರು ಇದು ನೋಡಲೇಬೇಕಾದ ಸ್ಟೋರಿ. ನಗರದಲ್ಲಿ ನಿಮಗೆ ಗೊತ್ತಿರೋ ಹಾಗೆ ಗುಂಡಿಗಳ ಸಮಸ್ಯೆ ಹೆಚ್ಚಾಗಿದೆ. ಇದು ನಿನ್ನೆ ಮೊನ್ನೆಯ ಸಮಸ್ಯೆ ಅಲ್ಲ. ದಿನದಿಂದ ದಿನಕ್ಕೆ ಗುಂಡಿಗಳ ಸಂಖ್ಯೆ ಹೆಚ್ಚುತ್ತದೆ ವಿನಹ ಕಡಿಮೆ ಅಂತೂ ಆಗುತ್ತಿಲ್ಲ. ಇದರಿಂದ ವಾಹನ ಸವಾರರು ಜೀವ ಕೈಯಲ್ಲಿಡಿದು ಸಂಚರಿಸಬೇಕಾದ ಸ್ಥಿತಿ ಬಂದಿದೆ.

Advertisement

ಸುಮ್ಮನಹಳ್ಳಿಯಿಂದ ಸುಂಕದಕಟ್ಟೆ ಕಡೆ ಸಂಪರ್ಕ ಕಲ್ಪಿಸುವ ಮಾಗಡಿ ಮುಖ್ಯ ರಸ್ತೆಯಲ್ಲಿ ಗುಂಡಿಗಳದ್ದೆ ಕಾರುಬಾರಾಗಿದೆ. ಇನ್ನೊಂದೆಡೆ ಸುಂಕದಕಟ್ಟೆಯಿಂದ ಮಾಗಡಿ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಗುಂಡಿಗಳಿಂದ ವಾಹನ ಸವಾರರು ಹೈರಾಣಾಗುತ್ತಿದ್ದಾರೆ.

ಪ್ರತಿನಿತ್ಯ ಒಂದಿಲ್ಲೊಂದು ಅಪಘಾತ ಹಾಗೂ ಟ್ರಾಫಿಕ್‌ಗೆ ಕಾರಣವಾಗುತ್ತಿವೆ. ಪಾಲಿಕೆಯವರು ಕೇವಲ ಮುಖ್ಯವಾದ ರಸ್ತೆ ಗುಂಡಿ ಮಾತ್ರ ಮುಚ್ಚಿ ಹೋಗ್ತಾರೆ. ಈ ರಸ್ತೆಯಲ್ಲಿ ಗುಂಡಿಗಳನ್ನ ಮುಚ್ಚಲು ಮುಂದಾಗುತ್ತಿಲ್ಲ ಅಂತ ಪಾಲಿಕೆ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರ ಹಾಕುತ್ತಿದ್ದಾರೆ.

ಇನ್ನೂ ಸುಕಂದಕಟ್ಟೆಯ ವಿಘ್ನೇಶ್ವರ ನಗರ 3ನೇ ಮುಖ್ಯ ರಸ್ತೆಯನ್ನ ಕಳೆದ ಒಂದು ವರ್ಷದ ಹಿಂದಷ್ಟೇ ನಿರ್ಮಾಣ ಮಾಡಲಾಗಿದೆ. ಆದರೆ ಈ ಮಳೆಗಾಲಕ್ಕೆ ಸಂಪೂರ್ಣವಾಗಿ ರಸ್ತೆ ಕಿತ್ತು ಬಂದು ಜಲ್ಲಿ ಕಲ್ಲಿನಿಂದ ರಸ್ತೆ ಕೂಡಿದರೆ ಹೆಜ್ಜೆ ಹೆಜ್ಜೆಗೂ ಗುಂಡಿಗಳಿವೆ.

ಹೀಗಾಗಿ ಸಿಕ್ಕಾಪಟ್ಟೆ ಟ್ರಾಫಿಕ್ ಜಾಮ್ ಆಗುತ್ತೆ. ಒಂದು ವರ್ಷದ ಹಿಂದೆ ಮಾಡಿದ ರಸ್ತೆ ಕಾಮಗಾರಿ ಕಳಪೆ ಅಂತ ಸ್ಥಳೀಯರು ಆರೋಪ ಮಾಡುತ್ತಿದ್ದು, ಕೂಡಲೇ ಪಾಲಿಕೆ ಅಧಿಕಾರಿಗಳು ರಸ್ತೆ ನಿರ್ಮಾಣ ಮಾಡಿ ಸಾರ್ವಜನಿಕರ ಓಡಾಟಕ್ಕೆ ಅನಕೂಲ ಮಾಡಿಕೊಡುವಂತೆ ಆಗ್ರಹಿಸುತ್ತಿದ್ದಾರೆ.

ಇನ್ನು ಈ ರಸ್ತೆ ಮೆಜೆಸ್ಟಿಕ್, ಮಲ್ಲೇಶ್ವರ, ಓಕಳೀಪುರಂ ಸೇರಿದಂತೆ ಅಕ್ಕಪಕ್ಕದ ರಸ್ತೆಗಳಿಗೆ ಕನೆಕ್ಟ್ ಆಗೋದರಿಂದ ಸಾಕಷ್ಟು ವಾಹನ ಸಂಚಾರ ಮಾಡುತ್ತೆ. ರಾತ್ರಿ ವೇಳೆ ಗುಂಡಿಗಳು ಕಾಣದೇ ಹಲವು ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿದ್ರು, ಪಾಲಿಕೆ ಮಾತ್ರ ಗುಂಡಿ ಮುಚ್ಚದೇ ಸೈಲೆಂಟ್ ಆಗಿದೆ.

ಗುಂಡಿಯಿಂದ ಟ್ರಾಫಿಕ್ ಸಮಸ್ಯೆ ಕೂಡ ಎದುರಾಗ್ತಿದ್ದು, ಪಾಲಿಕೆ ವಿರುದ್ಧ ಜನರು ಅಸಮಾಧಾನ ಹೊರಹಾಕ್ತಿದ್ದಾರೆ.


Spread the love

LEAVE A REPLY

Please enter your comment!
Please enter your name here