ದೆಹಲಿ:– ಇಲ್ಲಿನ ಪ್ರತಿಷ್ಟಿತ ಶಾಲೆ ಮುಂಭಾಗ ನಿಗೂಢ ಸ್ಪೋಟವಾಗಿದ್ದು, ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿರುವ ಘಟನೆ ಜರುಗಿದೆ. ದೆಹಲಿಯ ರೋಹಿಣಿಯಲ್ಲಿರುವ ಸಿಆರ್ಪಿಎಫ್ ಸ್ಕೂಲ್ ಎದುರು ಘಟನೆ ಜರುಗಿದೆ. ಬೆಳಗ್ಗೆ 7.50ರ ವೇಳೆಗೆ ಸ್ಫೋಟದ ಬಗ್ಗೆ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಲಾಯಿತು,
ತಕ್ಷಣವೇ ಎರಡು ಅಗ್ನಿಶಾಮಕ ವಾಹನಗಳು ಘಟನೆ ಸ್ಥಳಕ್ಕೆ ಬಂದಿದ್ದವು. ಘಟನೆಯ ಕುರಿತು ಹೆಚ್ಚಿನ ವಿವರಗಳಿಗಾಗಿ ಅಗ್ನಿಶಾಮಕ ದಳದ ತಂಡಗಳು ಪ್ರದೇಶದಲ್ಲಿ ಶೋಧವನ್ನು ಮುಂದುವರೆಸಿವೆ
ಶಾಲೆಯ ಗೋಡೆಗೆ ಹಾನಿಯಾಗಿದೆ, ಆದರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಫೋರೆನ್ಸಿಕ್ ತಂಡಗಳು ಮತ್ತು ದೆಹಲಿ ಪೊಲೀಸ್ ವಿಶೇಷ ಘಟಕದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಸ್ಫೋಟಕ್ಕೆ ಕಾರಣವೇನು ಎಂಬುದನ್ನು ಗುರುತಿಸಲು ಪ್ರಯತ್ನಿಸುತ್ತಿದ್ದಾರೆ.



