405 ಅಡಿ ಎತ್ತರದ ಧ್ವಜಸ್ತಂಭದಿಂದ ಹರಿದು ಬಿದ್ದ ರಾಷ್ಟ್ರಧ್ವಜ: ಕ್ರಮಕ್ಕೆ ಆಗ್ರಹಿಸಿದ ಜಮೀರ್!

0
Spread the love

ವಿಜಯನಗರ:- 76ನೇ ಗಣರಾಜ್ಯೋತ್ಸವದ ಸಂಭ್ರಮಾಚರಣೆ ವೇಳೆಯಲ್ಲೇ ಭಾರೀ ಅವಘಡ ಒಂದು ಸಂಭವಿಸಿದೆ. ದೇಶದ ಅತಿ ಎತ್ತರದ 405 ಅಡಿ ಧ್ವಜಸ್ತಂಭದಿಂದ ರಾಷ್ಟ್ರಧ್ವಜ ಹರಿದು ಬಿದ್ದ ಘಟನೆ ವಿಜಯನಗರದ ಡಾ ಪುನೀತ್ ರಾಜಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿದೆ.

Advertisement

76ನೇ ಗಣರಾಜ್ಯೋತ್ಸವದ ಪ್ರಯುಕ್ತ ಜಿಲ್ಲಾಡಳಿತದ ವತಿಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಸಮಾರಂಭವನ್ನು ಆಯೋಜಿಸಲಾಗಿತ್ತು. ಅದರಂತೆ ಇಂದು ಬೆಳಗ್ಗೆ 08:55ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಧ್ವಜಾರೋಹಣವನ್ನು ನೆರವೇರಿಸಿದ ಬಳಿಕ ಈ ಘಟನೆ ನಡೆದಿದೆ. ನಾನಾ ಪಡೆಗಳಿಂದ ಗೌರವ ವಂದನೆ ಸ್ವೀಕರಿಸುವ ವೇಳೆ 05 ಅಡಿ ಎತ್ತರದ ಧ್ವಜಸ್ತಂಬದಲ್ಲಿ ಏರುತ್ತಿರುವಾಗಲೇ ರಾಷ್ಟ್ರಧ್ವಜ ಏಕಾಏಕಿ ಹಗ್ಗ ಹರಿದು ಜಾರಿ ಬಿದ್ದಿದೆ. ಕೂಡಲೇ ಎಚ್ಚೆತ್ತ ಸಿಬ್ಬಂದಿ ಧ್ವಜವನ್ನು ಸರಿಪಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ.

ಈ ವೇಳೆ ಮಾತನಾಡಿದ ಜಮೀರ್, ರಾಷ್ಟ್ರ ಧ್ವಜ ಕಟ್ ಆಗಿ ಕೆಳಗೆ ಬಿದ್ದಿದೆ. ಯಾರೂ ಆತಂಕ ಪಡಬಾರದು. ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.


Spread the love

LEAVE A REPLY

Please enter your comment!
Please enter your name here