ಕಾಸರಗೋಡು:- ಜಿಲ್ಲೆಯ ಉಪ್ಪಳ ರೈಲ್ವೆ ಗೇಟ್ ಬಳಿ ಮಂಗಳೂರಿನ ಖ್ಯಾತ ರೌಡಿಶೀಟರ್ ಓರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ದುಷ್ಕರ್ಮಿಗಳು ಕೊಲೆಗೈದಿದ್ದಾರೆ.
Advertisement
ಟೋಪಿ ನೌಫಾಲ್ ಕೊಲೆಗೀಡಾದ ರೌಡಿಶೀಟರ್. ಈ ಕುರಿತು ಉಪ್ಪಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಫೈಸಲ್ ನಗರ ಮೂಲದ ನೌಫಾಲ್, ಮಂಗಳೂರಿನ ಅನೇಕ ಕುಖ್ಯಾತ ಗ್ಯಾಂಗ್ಗಳೊಂದಿಗೆ ಸೇರಿ ಡ್ರಗ್ಸ್ ವಹಿವಾಟು, ವಸೂಲಿ, ಅಕ್ರಮ ಚಿನ್ನ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದ. 2017ರ ಫರಂಗಿಪೇಟೆ ಜೋಡಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಆಗಿದ್ದ ಅವನ ವಿರುದ್ಧ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು ಎನ್ನಲಾಗಿದೆ.


