HomeGadag Newsಜೀವಹಾನಿ ನಿಯಂತ್ರಣದಲ್ಲಿ ಕೈಜೋಡಿಸಿ : ಗೋಪಾಲಕೃಷ್ಣ

ಜೀವಹಾನಿ ನಿಯಂತ್ರಣದಲ್ಲಿ ಕೈಜೋಡಿಸಿ : ಗೋಪಾಲಕೃಷ್ಣ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಮುಂಗಾರು ಹಂಗಾಮಿನ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಪ್ರವಾಹ ಸಂಭವಿಸಿದಾಗ ಉಂಟಾಗುವ ಸಂಕಷ್ಟದಿಂದ ಪಾರಾಗುವ ವಿಧಾನವನ್ನು ಜಿಲ್ಲಾ ಮಟ್ಟದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದವರು ಅಣುಕು ಪ್ರದರ್ಶನ ಪ್ರಸ್ತುತಪಡಿಸಿ ಜಾಗೃತಿ ಮೂಡಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ತಿಳಿಸಿದರು.

ನಗರದ ಭೀಷ್ಮಕೆರೆ ಆವರಣದಲ್ಲಿ ಜಿಲ್ಲಾಡಳಿತ, ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದೊಂದಿಗೆ ಆಯೋಜಿಸಲಾದ ಅಣುಕು ಪ್ರದರ್ಶನ ವೀಕ್ಷಿಸಿ ಅವರು ಮಾತನಾಡಿದರು.

ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದೊಂದಿಗೆ ಜಿಲ್ಲಾ ಮಟ್ಟದ ವಿವಿಧ ತಂಡಗಳು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಂತ್ರಸ್ತರನ್ನು (ಸಾರ್ವಜನಿಕರನ್ನು) ಪಾರು ಮಾಡುವುದಲ್ಲದೇ ತುರ್ತು ಪರಿಸ್ಥಿತಿಗನುಸಾರವಾಗಿ ಅವರ ಆರೋಗ್ಯ ರಕ್ಷಣೆಯ ಕಾರ್ಯಾಚರಣೆಗೂ ಕೂಡ ಮುಂದಾಗಲಿವೆ ಎಂದರು.

A nuclear demonstration on natural disaster management created awareness

ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ (ಎನ್‌ಡಿಆರ್‌ಎಫ್) ಮುಖ್ಯಸ್ಥರಾದ ಇನ್ಸ್ಪೆಕ್ಟರ್ ಗೋಪಾಲಕೃಷ್ಣ ಮಾತನಾಡಿ, ಪ್ರವಾಹ ಸಂದರ್ಭ ಉಂಟಾದಾಗ ನಾಗರಿಕರ ಪ್ರಾಣ ರಕ್ಷಣೆಗಾಗಿ ನಮ್ಮ ತಂಡವು ಸದಾ ಸನ್ನದ್ಧವಾಗಿ ಕಾರ್ಯನಿರ್ವಹಿಸುತ್ತದೆ ಎಂದರು.

ಈ ಅಣುಕು ಪ್ರದರ್ಶನ ವೀಕ್ಷಿಸಿದ ಜನಸಾಮಾನ್ಯರು, ಎನ್‌ಡಿಆರ್‌ಎಫ್ ತಂಡದ ಮೂಲಕ ಜನರ ಜೀವ ರಕ್ಷಣೆಯಲ್ಲಿ ಇತರರಿಗೂ ತಿಳಿಸಿಕೊಡುವ ಮೂಲಕ ಜೀವ ಹಾನಿ ಹಾಗೂ ಆಸ್ತಿ ಹಾನಿ ತಡೆಯುವದು ಈ ಅಣುಕು ಪ್ರದರ್ಶನದ ಮೂಲ ಉದ್ದೇಶವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ ಶ್ರೀನಿವಾಸಮೂರ್ತಿ ಕುಲಕರ್ಣಿ, ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ವಿ.ಎಸ್. ಠಕ್ಕೇಕರ್, ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತ ಶಿವಾನಂದ ರಾಜನಾಳ, ಎನ್‌ಡಿಆರ್‌ಎಫ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು, ವೋಡಾಫೋನ್, ಏರ್‌ಟೆಲ್, ಜಿಯೋ, ಬಿಎಸ್‌ಎನ್‌ಎಲ್ ಸೇರಿದಂತೆ ದೂರವಾಣಿ ಸಂಸ್ಥೆಯವರು, ಎನ್‌ಎಸ್‌ಎಸ್ ಘಟಕದವರು ಹಾಜರಿದ್ದರು.

ಈ ಅಣುಕು ಪ್ರದರ್ಶನ ಏರ್ಪಡಿಸುವ ಮೂಲಕ ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ಪ್ರವಾಹ ಎದುರಾದಾಗ ಸಾರ್ವಜನಿಕರ ಜೀವಹಾನಿ ತಡೆಯುವ ವಿಧಾನ ಹಾಗೂ ಆಸ್ತಿ ಸಂರಕ್ಷಣೆ ಕುರಿತು ಜನ ಸಾಮಾನ್ಯರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ವಿಪತ್ತು ನಿರ್ವಹಣಾ ತಂಡದೊಂದಿಗೆ ಸಂದಿಗ್ಧ ಪರಿಸ್ಥಿತಿಯಲ್ಲಿ ಸಾರ್ವಜನಿಕರೂ ಸಹ ಸಹಕಾರ ನೀಡುವ ಮೂಲಕ ಜೀವ ಹಾನಿ ನಿಯಂತ್ರಣದಲ್ಲಿ ಕೈಜೋಡಿಸಬೇಕು ಎಂದು ಎನ್‌ಡಿಆರ್‌ಎಫ್ ಮುಖ್ಯಸ್ಥ, ಇನ್ಸ್ಪೆಕ್ಟರ್ ಗೋಪಾಲಕೃಷ್ಣ ಹೇಳಿದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!