ವಿಜಯಪುರ : ಜಿಲ್ಲೆಯ ಚಡಚಣ ತಾಲೂಕಿನ ಹತ್ತಳ್ಳಿ ಗ್ರಾಮದಲ್ಲಿ ಸಾಲದ ಹಣ ವಾಪಸ್ ಕೊಡದಿದ್ದಕ್ಕೆ ವ್ಯಕ್ತಿಯನ್ನು ಸರಪಳಿಯಿಂದ ಕಟ್ಟಿಹಾಕಿರುವ ಅಮಾನವೀಯ ಘಟನೆ ಜರುಗಿದೆ
Advertisement
ಕುಮಾರ್‌ಗೌಡ ಬಿರಾದಾರ್ ಎಂಬ ವ್ಯಕ್ತಿಗೆ ಸರಪಳಿಯಿಂದ ಕಟ್ಟಲಾಗಿದೆ. ಕುಮಾರ್‌ಗೌಡನ ಬಳಿ ವ್ಯಕ್ತಿಯೋರ್ವ 20 ಸಾವಿರ ರೂ. ಸಾಲ ಪಡೆದಿದ್ದ.
ಇದೀಗ ಸಾಲದ ಹಣವನ್ನು ವಾಪಸ್ ಕೊಡದಿದ್ದಕ್ಕೆ ಆತನ ಕಾಲಿಗೆ ಸರಪಳಿ ಹಾಕಿ ಕಂಬಕ್ಕೆ ಕಟ್ಟಿ ಹಾಕಿದ್ದಾನೆ. ಕುಮಾರ್ ಗೌಡನ ಈ ಕೃತ್ಯಕ್ಕೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಈ ಸಂಬಂಧ ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.