ಒಳಮೀಸಲಾತಿ ಜಾರಿ ಕೈಬಿಡಲು ಮನವಿ

0
A plea to abandon the implementation of internal reservation
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಜಾರಿಗೊಳಿಸುವ ಪ್ರಸ್ತಾವ ವಿರೋಧಿಸಿ ಬಂಜಾರ (ಲಂಬಾಣಿ), ಕೊರಮ, ಕೊರಚ, ಭೋವಿ (ವಡ್ಡರ) ಭಜಂತ್ರಿ ಸೇರಿದಂತೆ ವಿವಿಧ ಸಮಾಜದ ನೂರಾರು ಸಾರ್ವಜನಿಕರು ಬುಧವಾರ ತಹಸೀಲ್ದಾರ ವಾಸುದೇವ ಸ್ವಾಮಿ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.

Advertisement

ಈ ವೇಳೆ ಬಂಜಾರ ಸಮಾಜದ ಮುಖಂಡರುಗಳಾದ ಅಶೋಕ ಲಮಾಣಿ, ರವಿ ಲಮಾಣಿ ಮಾತನಾಡಿ, ಅಸಮರ್ಥನೀಯ ಹಾಗೂ ದತ್ತಾಂಶಗಳನ್ನು ಆಧರಿಸಿದ ಒಳಮೀಸಲಾತಿ ವರ್ಗೀಕರಣವನ್ನು ಸಚಿವ ಸಂಪುಟ ಸಭೆಯಲ್ಲಿ ತಿರಸ್ಕರಿಸಬೇಕು. ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಅವೈಜ್ಞಾನಿಕ ಮತ್ತು ಕಾನೂನು ಮತ್ತು ಸಂವಿಧಾನಿಕ ಸಿಂಧುತ್ವದ ಕೊರತೆ ಎಂದು ಪರಿಗಣಿಸಿ ಸರ್ಕಾರ ಹೊಸ ಅಧ್ಯಯನ ನಡೆಸಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿನ ಸಮುದಾಯಗಳ ದತ್ತಾಂಶಗಳನ್ನು ವೈಜ್ಞಾನಿಕವಾಗಿ ಸಂಗ್ರಹಿಸದೇ ತರಾತುರಿಯಲ್ಲಿ ಒಳಮೀಸಲಾತಿ ಜಾರಿಗೊಳಿಸಬಾರದು. ಪರಿಶಿಷ್ಟ ಜಾತಿಗಳಲ್ಲಿ ಲಂಬಾಣಿ ಕೊರಚ, ಕೊರಮ, ಭೋವಿ, ವಡ್ಡರ ಸೇರಿದಂತೆ 101 ಜಾತಿಗಳಿದ್ದು, ಕೇವಲ ಎರಡು ಜಾತಿಗಳಿಗೆ ಒಳಮೀಸಲಾತಿ ನೀಡುವುದರಿಂದ ಉಳಿದ 99 ಜಾತಿಗಳಿಗೆ ಅನ್ಯಾಯವಾಗಲಿದೆ. ಸರ್ಕಾರ ಪರಿಶಿಷ್ಟ ಜಾತಿಯ ಒಳಮೀಸಲಾತಿ ಕುರಿತಾಗಿ ಅವೈಜ್ಞಾನಿಕವಾಗಿದ್ದು ಸಾಮಾಜಿಕ ನ್ಯಾಯದ ಕಗ್ಗೋಲೆಯಾಗಿದೆ ಎಂದು ಆರೋಪಿಸಿದರು.

ಈ ಬಗ್ಗೆ ವೈಜ್ಞಾನಿಕ ಅಧ್ಯಯನ ಕೈಗೊಳ್ಳದೇ ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಳ್ಳಲು ಹೊರಟಿರುವ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದರು. 2011ರ ನಂತರ ಯಾವುದೇ ಹೊಸ ಜನಗಣತಿ ಆಗಿಲ್ಲವಾದ್ದರಿಂದ ಅದರ ಸ್ಥಿತಿಗತಿಯ ಬಗ್ಗೆ ಈ ಡಾಟಾ ಸಂಗ್ರಹ ಆಗಬೇಕು. ಒಳಮೀಸಲಾತಿ ಜಾರಿಗೆ ಮಾಡದೇ ಪರಿಶಿಷ್ಟ ಜಾತಿ ಸಮುದಾಯಗಳಿಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

ತಹಸೀಲ್ದಾರ್ ವಾಸುದೇವ ಸ್ವಾಮಿ ಮನವಿ ಸ್ವೀಕರಿಸಿ, ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಕಳುಹಿಸಿ ಕೊಡುವ ಭರವಸೆ ನೀಡಿದರು. ಸಂಧರ್ಭದಲ್ಲಿ ಕರ್ನಾಟಕ ಸಂತ ಸೇವಾಲಾಲ ಸಂಘದ ತಾಲೂಕಾ ಅಧ್ಯಕ್ಷ ಪರಮೇಶ ಲಮಾಣಿ, ಭೋವಿ ಸಮಾಜದ ತಾಲೂಕಾ ಅಧ್ಯಕ್ಷ ರಾಜಣ್ಣ ಕಳ್ಳಿ, ರಮೇಶ ಲಮಾಣಿ, ರವಿ ಲಮಾಣಿ, ಲಕ್ಷ್ಮಣ ಲಮಾಣಿ, ಸಂತೋಷ ರಾಠೋಡ ತಿಪ್ಪಣ್ಣ ಲಮಾಣಿ, ಬಸವರಾಜ ಲಮಾಣಿ, ರುದ್ರಪ್ಪ ಲಮಾಣಿ ಯಲ್ಲಪ್ಪ ವಡ್ಡರ, ಫಕ್ಕೀರಪ್ಪ ದೊಡ್ಡಮನಿ, ದುರ್ಗಣ್ಣ ವಡ್ಡರ, ಮಹೇಶ ಲಮಾಣಿ, ಮುತ್ತು ಲಮಾಣಿ, ಕಿರಣ ಲಮಾಣಿ, ಸುರೇಶ ಲಮಾಣಿ, ಮಹೇಶ ರಾಠೋಡ, ವಿನೋದ ಲಮಾಣಿ, ಕೃಷ್ಣ ಲಮಾಣಿ ಮತ್ತಿತರಿದ್ದರು.

ಮೀಸಲಾತಿಯ ಆಶಯವಾದ ಸಾಮಾಜಿಕ, ಶೈಕ್ಷಣಿಕ ಮೂಲ ಮಾನದಂಡಗಳನ್ನು ಕಡೆಗಣಿಸಿ ಕೇವಲ ಜನಸಂಖ್ಯೆ ಆಧಾರದ ಮೇಲೆ ಹಿಂದುಳಿದಿರುವಿಕೆ ಗುರುತಿಸಲಾಗುತ್ತಿದೆ. ಈ ಒಳಮೀಸಲಾತಿ ಜಾರಿ ಮಾಡುವ ನಿರ್ಧಾರವನ್ನು ಸರಕಾರ ಕೈಬಿಡಬೇಕು. ಇಲ್ಲದಿದ್ದಲ್ಲಿ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಲಾಗುವದು ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here