ಮಿಡಿಗೇಶಿ ಪೊಲೀಸ್ ಠಾಣೆಯ ಪೊಲೀಸ್ ಪೇದೆ ನಾಪತ್ತೆ

0
Spread the love

ತುಮಕೂರು:-ಮಿಡಿಗೇಶಿ ಪೊಲೀಸ್ ಠಾಣೆಯ ಪೇದೆ ನಾಪತ್ತೆ ಆಗಿದ್ದಾರೆ. ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ
ಬಿದರಕೆರೆ ಬಳಿ ಪೇದೆ ಬಟ್ಟೆ,ಮೊಬೈಲ್, ಬೈಕ್ ಪತ್ತೆಯಾಗಿದೆ. ವೀರೇಶ 24 ನಾಪತ್ತೆಯಾದ ಪೇದೆ ಎನ್ನಲಾಗಿದೆ.

Advertisement

ಕೊಪ್ಪಳ ಮೂಲದ ಪೊಲೀಸ್ ಪೇದೆಯಾದ ಇವರು, ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ ಕಾಣೆಯಾಗಿದ್ದು, ಕೆರೆ ಹಾಗೂ ಬಾವಿ ಬಳಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಅಗ್ನಿ ಶಾಮಕದಳ ಜೊತೆಗೆ ಪೊಲೀಸರಿಂದ ಹುಡುಕಾಟ ಕಾರ್ಯ ನಡೆದಿದೆ.

ಇವರಿಗೆ ಡಿಸೆಂಬರ್ 22 ರಂದು ಮದುವೆ ಕೂಡ ನಿಶ್ಚಯವಾಗಿತ್ತು.. ಮದುವೆಗೆಂದು ರಜೆ ಪಡೆದ ಪೊಲೀಸ್ ಪೇದೆ ಇದಕ್ಕಿದ್ದಂತೆ ನಾಪತ್ತೆ ಆಗಿದ್ದಾರೆ. ಮಿಡಿಗೇಶಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ!


Spread the love

LEAVE A REPLY

Please enter your comment!
Please enter your name here