ಚಿಕ್ಕಮಗಳೂರು: ಪೊಲೀಸರಿಂದ ಪೊಲೀಸ್ ಜೀಪಿಗೇ ದಂಡ ವಿಧಿಸಿರುವಂತಹ ಘಟನೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಪಟ್ಟಣದಲ್ಲಿ ನಡೆದಿದೆ.
Advertisement
ನೋ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಎನ್ಆರ್ ಪುರ ಠಾಣೆಯ ಪೊಲೀಸ್ ಜೀಪಿಗೆ ಕೊಪ್ಪದ ಪೊಲೀಸರು 500 ರೂ. ದಂಡ ವಿಧಿಸಿದ್ದಾರೆ. ಎನ್ಆರ್ ಪುರ ಠಾಣೆಯ ಸಿಪಿಐ ಜೀಪು ನೋ ಪಾರ್ಕಿಂಗ್ ನಲ್ಲಿ ನಿಲ್ಲಿಸಲಾಗಿತ್ತು. ಈ ವೇಳೆ ಗಸ್ತಿನಲ್ಲಿದ್ದ ಪೊಲೀಸರು ವಾಹನ ಲಾಕ್ ಮಾಡಿದ್ದರು.
ಕೊಪ್ಪ ಪಿ.ಎಸ್.ಐ. ಬಸವರಾಜ್ ರಿಂದ ಎನ್.ಆರ್.ಪುರ ಸಿಪಿಐ ಜೀಪಿಗೆ ಫೈನ್ ಹಾಕಿದ್ದು, ಸದ್ಯ 500 ದಂಡ ಕಟ್ಟಿ ಚಾಲಕ ವಾಹನವನ್ನು ಬಿಡಿಸಿಕೊಂಡು ಹೋಗಿದ್ದಾರೆ. ಕಾನೂನು ಎಲ್ಲರಿಗೂ ಒಂದೇ ಎಂಬ ಸಂದೇಶವನ್ನು ಪಿಎಸ್ಐ ಸಾರಿದ್ದು, ಕೊಪ್ಪ ಪಿಎಸ್ಐ ಬಸವರಾಜ್ ಕಾರ್ಯಕ್ಕೆ ಚಿಕ್ಕಮಗಳೂರು ಜನ ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.