ಗದಗ: ಪೊಲೀಸ್ ಸ್ಟೇಷನ್ ನಲ್ಲಿ ಮಹಿಳಾ ಸಿಬ್ಬಂದಿ ಜೊತೆ ಮಾತನಾಡ್ತಾ ಅವರದ್ದೇ ಮೊಬೈಲ್ ಕಳ್ಳತನ ಮಾಡಿರುವ ಘಟನೆ ಗದಗ ಶಹರ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಸೈಪುಲ್ಲಾ ಎಂಬ ವ್ಯಕ್ತಿಯಿಂದ ಮೊಬೈಲ್ ಕಳ್ಳತನ ಮಾಡಲಾಗಿದ್ದು, ಮಹಿಳಾ ಸಿಬ್ಬಂದಿ ಜೊತೆ ಮಾತನಾಡುತ್ತಲೇ ಮೊಬೈಲ್ ಗೆ ಕೈ ಹಾಕಿ ಪ್ಯಾಂಟ್ ಜೇಬಿಗೆ ಇಳಿಸುವ ದೃಶ್ಯ ಸ್ಟೇಷನ್‌ನಲ್ಲಿ ಅಳವಡಿಸಿದ್ದ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
Advertisement
ಹೋಟೆಲ್ ಒಂದರಲ್ಲಿ ನಡೆದಿದ್ದ ಗಲಾಟೆ ವಿಷಯಕ್ಕೆ ಸಂಬಂಧಿಸಿದಂತೆ ದೂರು ನೀಡಲು ಮತ್ತೊಬ್ಬನ ಜೊತೆಗೆ ಈ ಸೈಪುಲ್ಲಾ ಮುಲ್ಲಾ ಪೊಲೀಸ್ ಸ್ಟೇಷನ್ ಗೆ ಬಂದಿದ್ದನು ಎನ್ನಲಾಗಿದೆ. ಬಿಲ್ ಕೊಡದೆ ಗಲಾಟೆ ಮಾಡಿದ್ದ ವ್ಯಕ್ತಿಯ ಪರವಾಗಿ ಸ್ಟೇಷನ್ ಗೆ ಬಂದಿದ್ದ ಎಂದು ಹೇಳಲಾಗಿದೆ. ಮೊಬೈಲ್ ಕದ್ದ ಅಸಾಮಿಯ ಪತ್ತೆಗಾಗಿ ಪೊಲೀಸರ ತನಿಖೆ ಜೋರಾಗಿದೆ.