ಬೆಂಗಳೂರು:– ಎರಡು ತಲೆಯ ಅಪರೂಪದ ಹಾವು ಬೆಂಗಳೂರಿನ ಹೃದಯ ಭಾಗದಲ್ಲಿರುವ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿದೆ.
Advertisement
ಎರಡು ತಲೆ ಹಾವು ಅಥವಾ ಮಣ್ಣಾವು ಅಂತ ಕರೆಯಲ್ಪಡುವ ಈ ಹಾವು ಅದೃಷ್ಟ ಎಂದು ಸಾಕಷ್ಟು ಮಂದಿ ನಂಬಿದ್ದಾರೆ. ಹಾಗಾಗಿ ಈ ಹಾವುಗಳ ಕಳ್ಳ ಸಾಗಣಿಕೆ ಸಹ ಹೆಚ್ಚು ನಡೆಯುತ್ತದೆ. ಇನ್ನೂ ಹಾವು ಕಂಡ ತಕ್ಷಣ ಆಟೋ ಚಾಲಕರು ಇಳಿದು ರಕ್ಷಣೆ ಮಾಡಿದ್ದಾರೆ.
ಕೂಡಲೇ ವನ್ಯಜೀವಿ ಸಂರಕ್ಷಕರು ಮತ್ತು ಪ್ರಾಣಿ ಕಲ್ಯಾಣ ಪರಿಪಾಲಕರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿಯಂತೆ ವನ್ಯಜೀವಿ ಸಂರಕ್ಷಕ ಪ್ರಸನ್ನ ಕುಮಾರ್ ಸ್ಥಳಕ್ಕೆ ಧಾವಿಸಿ ಹಾವು ರಕ್ಷಣೆ ಮಾಡಿ ಸೂಕ್ತವಾದ ಆವಾಸ ಸ್ಥಳದಲ್ಲಿ ಬಿಟ್ಟಿದ್ದಾರೆ.