ವಿಜಯಸಾಕ್ಷಿ ಸುದ್ದಿ, ಗದಗ : 2017ರಲ್ಲಿ ರೂಪಿತಗೊಂಡಿರುವ ಹೊಸ ವೃಂದ ಮತ್ತು ನೇಮಕಾತಿ ನಿಯಮವನ್ನು 2016ಕ್ಕಿಂತ ಮೊದಲ ನೇಮಕವಾದವರಿಗೆ ಪೂರ್ವಾನ್ವಯಗೊಳಿಸಬಾರದು ಹಾಗೂ 2016ಕ್ಕಿಂತ ಮೊದಲು ನೇಮಕಾತಿಯಾದ ಸರ್ವರಿಗೂ ಈ ಹಿಂದಿನಂತೆ ಪ್ರೌಢಶಾಲೆಗಳಿಗೆ ವಿದ್ಯಾರ್ಹತೆಯ ಆಧಾರದ ಮೇಲೆ ಬಡ್ತಿ ನೀಡುವುದು ಹಾಗೂ ಮುಖ್ಯ ಗುರುಗಳ ಹುದ್ದೆಗಳಿಗೆ ಸೇವಾ ಜೇಷ್ಠತೆಯಂತೆ ಬಡ್ತಿ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಗದಗ ಗ್ರಾಮೀಣ ಹಾಗೂ ಶಹರ ಘಟಕಗಳ ಶಿಕ್ಷಕರು ಗದಗ ತಹಸೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವಿ.ಎಂ. ಹಿರೇಮಠ, ಗದಗ ತಾಲೂಕು ಗ್ರಾಮೀಣ ಅಧ್ಯಕ್ಷ ಎಸ್.ಆರ್. ಬಂಡಿ, ಗೌರವಾಧ್ಯಕ್ಷ ಎಂ.ಎಂ. ಮೇಗಲಮನಿ, ಉಪಾಧ್ಯಕ್ಷ ಪಿ.ಬಿ. ಮುಧೋಳಮಠ, ಎಸ್.ಡಿ. ಗುಂಜಳ, ಕೋಶಾಧ್ಯಕ್ಷ ಎಸ್.ಎಸ್. ಲಕ್ಷಕೊಪ್ಪ, ಬಿ.ಬಿ. ಹರ್ತಿ, ಐ.ಕೆ. ಮೋಟಗಿ, ಡಿ.ಎಸ್. ತಳವಾರ, ಬಿ.ಬಿ. ಹಡಪದ, ಎಸ್.ಪಿ. ಕೊಪ್ಪದ, ವಿ.ಎಸ್. ವಾಲ್ಮೀಕಿ, ಪಿ.ವಿ. ಬೇವಿನಮರದ, ಎಸ್.ಬಿ. ಅಂಗಡಿ, ಎನ್.ಆರ್. ಶೈಲಾ, ಎಫ್.ಎಸ್. ಗಾಣಿಗೇರ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗದಗ ಶಹರ ಅಧ್ಯಕ್ಷ ಎಸ್.ಕೆ. ಮಂಗಳಗುಡ್ಡ, ಪ್ರಧಾನ ಕಾರ್ಯದರ್ಶಿ ಪಿ.ಸಿ. ಕನಾಜ, ಆರ್.ಬಿ. ಸಂಕಣ್ಣವರ, ಕೋಶಾಧ್ಯಕ್ಷ ರಶೀದ್, ಎಂ.ಪಿ. ಮೆಣಸಿನಕಾಯಿ, ಎಂ.ಎಸ್. ತೊಂಡಿಹಾಳ ಮುಂತಾದವರಿದ್ದರು.


