ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ದೊಡ್ಡೂರು ರಸ್ತೆಗೆ ಹೊಂದಿಕೊಂಡಿರುವ ಉಮಾ ವಿದ್ಯಾಲಯ ಹೈಸ್ಕೂಲ್ ಮೈದಾನದ ಹತ್ತಿರದ ಶ್ರೀ ಮೈಲಾರಲಿಂಗೇಶ್ವರ ಸಿಬಾರದ ಸ್ಥಳದಲ್ಲಿ ಪುರಸಭೆಯ ಎಸ್‌ಎಫ್‌ಸಿ ಅನುದಾನದಿಂದ ಉದ್ಯಾನವನವನ್ನು ನಿರ್ಮಿಸಬೇಕು ಎಂದು ಭಕ್ತರು ಹಾಗೂ ಸಾರ್ವಜನಿಕರು ಪುರಸಭೆ ಅಧ್ಯಕ್ಷರಿಗೆ ಹಾಗೂ ಮುಖ್ಯಾಧಿಕಾರಿಗಳಿಗೆ ಮನವಿ ಅರ್ಪಿಸಿದರು.
ಮನವಿ ಸ್ವೀಕರಿಸಿದ ಪುರಸಭೆ ಸದಸ್ಯರು ಮತ್ತು ಮುಖ್ಯಾಧಿಕಾರಿಗಳು, ಈ ಕುರಿತಂತೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವದಾಗಿ ಹೇಳಿದರು. ಪುರಸಭೆ ಸದಸ್ಯರಾದ ಪೂರ್ಣಿಮಾ ಪಾಟೀಲ, ಅಶ್ವಿನಿ ಅಂಕಲಕೋಟಿ, ವಿಜಯ ಕರಡಿ, ವಾಣಿ ಹತ್ತಿ, ಪೂಜಾ ಖರಾಟೆ, ಕವಿತಾ ಶರಸೂರಿ, ರಾಮಪ್ಪ ಗಡದವರ, ಮಂಜುಳಾ ಗುಂಜಳ, ಮಹಾದೇವಪ್ಪ ಅಣ್ಣಿಗೇರಿ, ನೀಲಪ್ಪ ಪೂಜಾರ, ಪ್ರಕಾಶ ಕೊಂಚಿಗೇರಿಮಠ, ಮುಖ್ಯಾಧಿಕಾರಿ ಮಹೇಶ ಹಡಪದ ಇದ್ದರು.
ಸಾರ್ವಜನಿಕರಾದ ನೀಲಪ್ಪ ಕನವಳ್ಳಿ, ಎನ್.ಎಚ್. ಶರಸೂರಿ, ಬಸವಣ್ಣೆಪ್ಪ ನಂದೆಣ್ಣವರ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.