ಅನಧಿಕೃತ ಕೊಳವೆಬಾವಿ ಮುಚ್ಚಿಸಲು ಮನವಿ

0
A request to close the unauthorized borewell
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ತಾಲೂಕಿನ ಹಿರೇಮಲ್ಲಾಪೂರ ಗ್ರಾಮದ ರಿ.ಸ.ನಂ. 45 ಮತ್ತು 46ರಲ್ಲಿ ಬೆಂಗಳೂರಿನ ಅಲ್ಪಿನೆ ಈಥನೋಲ್ ಪ್ರೈವೇಟ್ ಇವರು ಪರವಾನಿಗೆ ಇಲ್ಲದೇ ಬೋರವೆಲ್‌ಗಳನ್ನು ಹಾಕಿದ್ದು, ಇವುಗಳನ್ನು ಕೂಡಲೇ ಬಂದ್ ಮಾಡಬೇಕೆಂದು ಜಯ ಕರ್ನಾಟಕ ಸಂಘಟನೆಯಿಂದ ಬುಧವಾರ ತಹಸೀಲ್ದಾರರಿಗೆ ಮನವಿ ಅರ್ಪಿಸಲಾಯಿತು.

Advertisement

ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕಾಧ್ಯಕ್ಷ ರಮೇಶ ಹಂಗನಕಟ್ಟಿ ಮಾತನಾಡಿ, ಈ ಸ್ಥಳದಲ್ಲಿ ಒಟ್ಟು 13 ಬೋರ್‌ವೆಲ್‌ಗಳನ್ನು ಹಾಕಿದ್ದು, ಸುತ್ತಮುತ್ತಲಿನ ರೈತರ ಜಮೀನುಗಳಲ್ಲಿ ಅಂತರ್ಜಲ ಕುಸಿದು ತೊಂದರೆಯಾಲಿದೆ. ಕೂಡಲೇ ಬೋರ್‌ವೆಲ್‌ಗಳನ್ನು ಸಂಪೂರ್ಣವಾಗಿ ಮುಚ್ಚಿಸಿ, ಇಲ್ಲಿನ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದರು.

ತಹಸೀಲ್ದಾರ ವಾಸುದೇವ ಸ್ವಾಮಿ ಮನವಿ ಸ್ವೀಕರಿಸಿದರು. ಉಪಾಧ್ಯಕ್ಷ ರುದ್ರಗೌಡ ಪಾಟೀಲ್, ಇಶಾಕಭಾಷಾ ಹರಪನಹಳ್ಳಿ, ವಿ.ಎಸ್. ಮಠಪತಿ, ಸಚಿನ ಮೇಲ್ಮುರಿ, ಸಂತೋಷ ಬಡಕಲ್, ಭೀಮಪ್ಪ ಪೂಜಾರ, ಕುಮಾರ ಕಡಕೋಳ, ನಾಗರಾಜ ಉಪ್ಪಾರ, ಹನುಮಂತಪ್ಪ ಬಂಡಾರಿ, ಹಾಲಪ್ಪ ಬಂಡಾರಿ, ಬಸವರಾಜ ಮೇಲ್ಮುರಿ, ಪ್ರದೀಪ ಬಳಿಗಾರ, ಶಿವರಾಜ ಕೋತಬಾಳ, ಮಾಂತೆಶ ಬಂಡಾರಿ, ಆನಂದ ಕಡಕೋಳ, ರಾಜು ಕೇರೆಕೊಪ್ಪದ, ಪುಟ್ಟಪ್ಪ ಹರಿಜನ, ರುದ್ರಪ್ಪ ಬೂದಿಹಾಳ, ಹೊನ್ನಪ್ಪ ಹುರಕನವರ, ಆಂಜನೇಯ ಕಳಸಾಪುರ ಮುಂತಾದವರಿದ್ದರು.


Spread the love

LEAVE A REPLY

Please enter your comment!
Please enter your name here