ಹತ್ಯೆಯ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಮನವಿ

0
A request to give severe punishment to those accused of Renukaswamy's murder
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಚಿತ್ರದುರ್ಗದ ರೇಣುಕಾಸ್ವಾಮಿಯ ಬರ್ಬರ ಹತ್ಯೆಯನ್ನು ಖಂಡಿಸಿ, ಹತ್ಯೆಗೈದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಅಖಿಲ ಕರ್ನಾಟಕ ಬೇಡ ಜಂಗಮ ಸಮಾಜ ಸಂಸ್ಥೆ ಗದಗ ಜಿಲ್ಲಾ ಘಟಕದ ವತಿಯಿಂದ ಗದಗ ತಹಸೀಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

Advertisement

ಮನವಿ ಸಲ್ಲಿಸಿ ಮಾತನಾಡಿದ ಸಂಸ್ಥೆಯ ಗದಗ ಜಿಲ್ಲಾ ಘಟಕದ ಅಧ್ಯಕ್ಷ ಶಿದ್ರಾಮಯ್ಯ ಕಟಗಿಹಳ್ಳಿಮಠ, ನಮ್ಮ ಸಮಾಜದವರ ಮೇಲೆ ದುಷ್ಟಶಕ್ತಿಗಳು ಭೀಕರವಾಗಿ ಹತ್ಯೆ ಮಾಡುವ ಘಟನೆಗಳು ಜರುಗುತ್ತಲಿವೆ.

ಇತ್ತೀಚಿಗೆ ಹುಬ್ಬಳ್ಳಿಯ ನೇಹಾ ಹಿರೇಮಠ, ಚಿತ್ರದುರ್ಗ ರೇಣುಕಾಸ್ವಾಮಿಯ ಭೀಕರ ಹತ್ಯೆಗಳು ನಡೆದಿದ್ದು, ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಮಾರಾಕಾಸ್ತçಗಳಿಂದ ಹಲ್ಲೆ ಮಾಡಿ ಚಿತ್ರಹಿಂಸೆ ನೀಡಿ ಹತ್ಯೆಗೈದು ಚರಂಡಿಯಲ್ಲಿ ಎಸೆದಿರುವ ಪ್ರಕರಣವೂ ಬೆಳಕಿಗೆ ಬಂದಿದೆ. ಈ ದುಷ್ಕರ್ಮಿಗಳಿಗೆ ಆದಷ್ಟು ಬೇಗ ಕಠಿಣ ಶಿಕ್ಷೆ ನೀಡಬೇಕೆಂದು ಮನವಿ ಸಲ್ಲಿಸಿ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಜಂಗಮ ಸಮಾಜದ ಗೌರವ ಅಧ್ಯಕ್ಷರಾದ ಬಸಯ್ಯ ಸಾಸ್ವಿಹಳ್ಳಿಮಠ, ಶಂಕರಗೌಡ ಭರಮಗೌಡ್ರ, ವೀರಯ್ಯ ಕಂಬಾಳಿಮಠ, ಅಂದಾನಯ್ಯ ವಿರಕ್ತಮಠ, ಅಜಯ ಹಿರೇಮಠ, ಸಂತೋಷ ಹಿರೇಮಠ, ಶಿದ್ರಾಮಯ್ಯ ಹಿರೇಮಠ, ವೀರೇಶ ಹೊಸಮಠ, ಮೃತ್ಯುಂಜಯ ಕುಲಕರ್ಣಿ, ಜಗದೀಶ ಹಿರೇಮಠ ಚಿಕ್ಕಮಣ್ಣೂರ, ಕುಮಾರ ದೇವದುರ್ಗಮಠ ಹಾಗೂ ಕಳಸಾಪೂರ, ಬೆಳಧಡಿ, ನರಸಾಪೂರ, ಸಮಾಜದ ಹಿರಿಯರು, ಯುವಕರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here