ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ತಾಲೂಕಾ ಸರಕಾರಿ ನೌಕರರ ಸಂಘದ ಕಚೇರಿಯನ್ನು ತಾತ್ಕಾಲಿಕವಾಗಿ ಪ್ರಾರಂಭಿಸಲು ಪುರಸಭೆಯ ಖಾಲಿ ಇರುವ ಕೊಠಡಿಯನ್ನು ನೀಡುವಂತೆ ಲಕ್ಮೇಶ್ವರ ತಾಲೂಕ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಡಿ. ಹವಳದ ಅವರ ನೇತೃತ್ವದಲ್ಲಿ ಶುಕ್ರವಾರ ಪುರಸಭೆ ಅಧ್ಯಕ್ಷರಿಗೆ ಹಾಗೂ ಮುಖ್ಯಾಧಿಕಾರಿಗಳಿಗೆ ಮನವಿ ಅರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಜಿ.ಡಿ. ಹವಳದ, ಸರಕಾರಿ ನೌಕರರು ಈ ಸಂಘದ ಸದಸ್ಯರಿದ್ದು, ಸಭೆಗಳನ್ನು ನಡೆಸಲು ಹಾಗೂ ಪದಾಧಿಕಾರಿಗಳು ಕುಳಿತು ಚರ್ಚಿಸಲು ಕಚೇರಿಯ ಅವಶ್ಯಕತೆಯಿದೆ. ಸಂಘಕ್ಕೆ ತಾತ್ಕಾಲಿಕವಾಗಿ ಬಾನುಮಾರ್ಕೆಟ್ ಮೇಲುಗಡೆ ಅಂತಸ್ತಿನಲ್ಲಿರುವ ಗ್ರಾಮ ಆಡಳಿತ ಅಧಿಕಾರಿಗಳ ಕಚೇರಿಯ ಪಕ್ಕದಲ್ಲಿ ಖಾಲಿ ಇರುವ ಒಂದು ಕೊಠಡಿಯನ್ನು ತಾತ್ಕಾಲಿಕ ಕಚೇರಿ ಆರಂಭಿಸಲು ನೀಡಬೇಕೆಂದು ಮನವಿ ಮಾಡುವದಾಗಿ ಹೇಳಿದರು.
ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರ್ಗಣ್ಣವರ ಮನವಿ ಸ್ವೀಕರಿಸಿ, ಆಡಳಿತ ಮಂಡಳಿ ಸಭೆಯಲ್ಲಿ ಈ ಕುರಿತು ವಿಷಯ ಪ್ರಸ್ತಾಪಿಸಿ ಸೂಕ್ತ ನಿರ್ಧಾರ ಕೈಗೊಳ್ಳುವದಾಗಿ ಹೇಳಿದರು. ಈ ಸಂದರ್ಭದಲ್ಲಿ ಪುರಸಭೆ ಹಿರಿಯ ಸದಸ್ಯರಾದ ರಾಜಣ್ಣ ಕುಂಬಿ, ವಿಜಯ ಕರಡಿ, ಮುಖ್ಯಾಧಿಕಾರಿ ಮಹೇಶ ಹಡಪದ, ತಾಲೂಕು ನೌಕರ ಸಂಘದ ಕಾರ್ಯದರ್ಶಿ ಎಂ.ಎ. ನದಾಫ್, ಖಜಾಂಚಿ ವಾರದ್, ನೌಕರ ಸಂಘದ ನಿಕಟಪೂರ್ವ ಅಧ್ಯಕ್ಷ ಡಿ.ಎಚ್. ಪಾಟೀಲ್, ಶಿಕ್ಷಕರ ಸಂಘದ ಕಾರ್ಯದರ್ಶಿ ಚಂದ್ರು ನೇಕಾರ್, ಬಸವರಾಜ್ ಯತ್ನಳ್ಳಿ, ಸರ್ಕಾರಿ ನೌಕರ ಸಂಘದ ನಿರ್ದೇಶಕರಾದ ಸಂತೋಷ್ ಗುಂಜಳ್, ಬಸವರಾಜ್ ಯರಗುಪ್ಪಿ, ಫಕೀರಪ್ಪ ಹೂಗಾರ್, ಪ್ರಶಾಂತ್ ಸನದಿ, ಶ್ರೀಕಾಂತ್ ಬಾಲೆಹೊಸೂರ್, ಎ.ಎಂ. ಅಕ್ಕಿ. ಡಿ.ಡಿ. ಲಮಾಣಿ ಹಾಗೂ ನೌಕರ ಸಂಘದ ನಿರ್ದೇಶಕರು ಹಾಗೂ ಶಿಕ್ಷಕರ ಸಂಘದ ನಿರ್ದೇಶಕರು ಹಾಜರಿದ್ದರು.



