ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ಪುರಸಭೆ ಅಧಿಕಾರಿಗಳಿಗೆ ಮನವಿ

0
A request to the municipal authorities demanding the construction of the road
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಸೋಮೇಶ್ವರ ಪಾದಗಟ್ಟಿಯಿಂದ ಹಳೆ ಬಸ್ ನಿಲ್ದಾಣದವರೆಗೆ ರಸ್ತೆ ನಿರ್ಮಿಸಬೇಕು ಎಂದು ಆಗ್ರಹಸಿ ಮಂಗಳವಾರ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿ ಬಣ) ಕಾರ್ಯಕರ್ತರು ಪುರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Advertisement

ವೇದಿಕೆಯ ತಾಲೂಕು ಘಟಕದ ಅಧ್ಯಕ್ಷ ಮಹೇಶ ಕಲಘಟಗಿ ಮಾತನಾಡಿ, ಸೋಮೇಶ್ವರ ಪಾದಗಟ್ಟಿಯಿಂದ ಹಳೇ ಬಸ್ ನಿಲ್ದಾಣದವರೆಗಿನ ರಸ್ತೆಯ ವಿಸ್ತರಣೆಗೆ ಒಪ್ಪಿಗೆ ಸಿಕ್ಕಿ ಈಗಾಗಲೇ ಹತ್ತು ವರ್ಷಗಳೇ ಕಳೆದಿವೆ. ಆದರೆ ಪುರಸಭೆ ಮಾತ್ರ ಈವರೆಗೂ ರಸ್ತೆ ನಿರ್ಮಿಸಿಲ್ಲ. ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಈಗಾಗಲೇ ವಿಸ್ತರಣೆ ಮಾಡಿರುವ ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಕಾಣಿಸಿಕೊಂಡಿದ್ದು ಆಗಾಗ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಳ್ಳುತ್ತಿದ್ದಾರೆ. ಕಾರಣ ಸಾರ್ವಜನಿಕರು ರೊಚ್ಚಿಗೇಳುವ ಮುನ್ನವೇ ಎಚ್ಚೆತ್ತುಕೊಂಡು ಆದಷ್ಟು ಬೇಗನೇ ರಸ್ತೆ ನಿರ್ಮಿಸಬೇಕು. ಇಲ್ಲದಿದ್ದರೆ ಸಂಘಟನೆಯಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಪ್ರವೀಣ ದಶಮನಿ, ಪ್ರಶಾಂತಗೌಡ ಪಾಟೀಲ, ಹಸರೆಡ್ಡಿ, ಗಂಗಾಧರ ಬೆಳವಗಿ, ಕುಮಾರ ಶೆಟ್ಟರ, ಕುಮಾರ ಕನವಳ್ಳಿ, ಮುರುಳೀಧರ ಮಲ್ಲಸಮುದ್ರ, ಸಿದ್ದು ಕಿವುಡನವರ, ಶಕ್ತಿ ಕತ್ತಿ, ವಾಸು ಗೋಸಾವಿ, ಸಂಜಯ ಗೋಸಾವಿ, ಲೋಹಿತ ಬಿಂದಕಟ್ಟಿ ಮತ್ತಿತರರು ಇದ್ದರು.

 


Spread the love

LEAVE A REPLY

Please enter your comment!
Please enter your name here