ವಿಜಯಸಾಕ್ಷಿ ಸುದ್ದಿ, ನರೇಗಲ್ : ಕಳೆದ ವರ್ಷ ಇದೇ ಆಗಷ್ಟ್ 14ಕ್ಕೆ 1972-73ನೇ ಸಾಲಿನಲ್ಲಿ 10ನೇ ತರಗತಿ ಕಲಿತ ಎಲ್ಲ ವಿದ್ಯಾರ್ಥಿಗಳು ಸೇರಿ ಗುರು ವಂದನೆ ಮಾಡಿದ್ದರು. ಈಗ ಅದೇ ದಿನ ಮತ್ತದೇ ವಿದ್ಯಾರ್ಥಿಗಳು ಸೇರಿ ಶ್ರಾವಣ ಮಾಸದಲ್ಲಿ ಅದೇ ದಿನ ಮತ್ತೆ ಸೇರಿ ವನ ಭೋಜನವನ್ನು ಸವಿದರು.
Advertisement
ಮನೆಯಲ್ಲಿ ಬುತ್ತಿ ಕಟ್ಟಿಸಿಕೊಂಡು ಬಂದು ಅಬ್ಬಿಗೇರಿ ರಸ್ತೆಯಲ್ಲಿರುವ ಹಿರೇಮಠದ ರೇಣುಕಾಚಾರ್ಯ ಸಭಾಭವನದ ತೋಟದಲ್ಲಿ ಆವರಣದಲ್ಲಿ ಎಲ್ಲರೂ ಸೇರಿ ಸವಿಯಾದ ಭೋಜನವನ್ನು ಸವಿದರು. ಊಟದ ಮಧ್ಯೆ ಬಸವರಾಜ ದಿಂಡೂರ, ಬಸವರಾಜ ವೀರಾಪೂರ, ಎಸ್.ಎಸ್. ಹಿರೇಮಠ, ನಿವೃತ್ತ ಮುಖ್ಯ ಶಿಕ್ಷಕ ಅರುಣ ಬಿ.ಕುಲಕರ್ಣಿ, ಬಸವರಾಜ ಸಂಕನಗೌಡ್ರ, ರುದ್ರಗೌಡ ಹಿರೆವಡೆಯರ, ಈಶ್ವರ ಬೆಟಗೇರಿ, ಮಲ್ಲಯ್ಯ ಗುಂಡಗೋಪುರ ಮಠ, ಸಂಗಮೇಶ ಮೆಣಸಿಗಿ , ಚಂದ್ರಾಮ ಗ್ರಾಮಪುರೋಹಿತ ವಿಶೇಷ ಮೆರಗು ನೀಡಿದರು.