ಬೆಂಗಳೂರು:- ಪುಡಿರೌಡಿ ಓರ್ವ ಲಾಂಗ್ ನಿಂದ ಸಿಕ್ಕ-ಸಿಕ್ಕ ಕಾರ್‌ಗಳ ಗ್ಲಾಸ್ ಹೊಡೆದು ಡ್ಯಾಮೇಜ್ ಮಾಡಿರುವ ಘಟನೆ ಬೆಂಗಳೂರಿನ ಕೆ.ಆರ್ ಪುರಂ ಮಾರ್ಕೆಟ್‌ನಲ್ಲಿಂದು ಜರುಗಿದೆ.
Advertisement
ಬೆಳಗ್ಗಿನ ಜಾವ ಕಾರು, ಗೂಡ್ಸ್ ವಾಹನಗಳ ಗ್ಲಾಸ್ ಪುಡಿ-ಪುಡಿ ಮಾಡಿದ್ದು, ಮಾಲೀಕರು ಅಸಮಾಧಾನ ಹೊರಹಾಕಿದ್ದಾರೆ. ಗಾಂಜಾ ನಶೆಯಲ್ಲಿ ಲಾಂಗ್ ಹಿಡಿದು ವ್ಯಾಪಾರಿಗಳಿಗೆ, ಜನರಿಗೆ ಬೆದರಿಕೆ ಹಾಕಿ ವೆಹಿಕಲ್ ಡ್ಯಾಮೇಜ್ ಮಾಡಿದ್ದಾನೆ. ಸ್ಥಳದಲ್ಲಿದ್ದ ಸಾರ್ವಜನಿಕರು ಪುಡಿರೌಡಿಯನ್ನ ಹಿಡಿದು ಕೆ.ಆರ್ ಪುರಂ ಠಾಣೆಯ ಪೊಲೀಸರಿಗೊಪ್ಪಿಸಿದ್ದಾರೆ. ಇನ್ನೂ ಸಿಲಿಕಾನ್ ಸಿಟಿಯಲ್ಲಿ ಆಗಾಗ್ಗೆ ಪುಡಿರೌಡಿಗಳು ಅಟ್ಟಹಾಸ ಮೆರೆಯುತ್ತಿದ್ದಾರೆ. ಪೊಲೀಸರಿಂದ ಗೂಸ ಬೀಳಲಿಲ್ಲ ಅಂದ್ರೆ ಪುಂಡತನ ಮೆರೆಯೋದು ನಿಲ್ಸಲ್ಲ. ಹೀಗಾಗಿ ಈ ಪುಂಡರಿಗೆ ಕಡಿವಾಣ ಬೀಳಬೇಕಿದೆ.