ಜ.ತೋಂಟದಾರ್ಯ ಮಠದ ಜಾತ್ರೆಯಲ್ಲಿ ಭಾವೈಕ್ಯತೆಯ ಭಾವಸಂಭ್ರಮ

0
tontadarya
Spread the love

ತೋಂಟದ ಸಿದ್ಧಲಿಂಗನ ಜಾತ್ರೆ ಅಂದರೆ, ಗ್ರಾಮ ಮತ್ತು ಪಟ್ಟಣಗಳ ಒಂದು ಪ್ರಮುಖ ಪರಂಪರೆ.
ಸಾಮಾನ್ಯವಾಗಿ ಒಂದು ಸಾರ್ವಜನಿಕ ಉದ್ದೇಶಕ್ಕಾಗಿ ಒಂದುಗೂಡಿಸುವಿಕೆಯೇ ಜ. ತೋಂಟದಾರ್ಯ ಮಠದ ಜಾತ್ರಾ ವಿಶೇಷತೆ ಎಂದು ಪರಿಗಣಿಸಲಾಗುತ್ತಿದೆ. ಪ್ರತಿ ವರ್ಷಕ್ಕೊಮ್ಮೆ ಸರ್ವತ್ರ ಸುಭಿಕ್ಷಾರ್ಥವಾಗಿ ಧಾರ್ಮಿಕ ಪರಂಪರೆಯಂತೆ ಪೂಜಾ ಉತ್ಸವಗಳೊಂದೊಡಗೂಡಿದ ಜ. ತೋಂಟದಾರ್ಯ ಮಠದ ರಥೋತ್ಸವವನ್ನು ಅತೀ ವಿಜೃಂಭಣೆಯಿಂದ ನಡೆಸಲಾಗುತ್ತಿದೆ.
ಇದು ನಮ್ಮ ದಕ್ಷಿಣ ಭಾಗದ ಕರ್ನಾಟಕದಲ್ಲಿ ನಡೆಯುವ ಅತಿ ದೊಡ್ಡ ಜಾತ್ರೆ. ಈ ಜಾತ್ರೆಗೆ ನಾಡಿನ ಮೂಲೆ ಮೂಲೆಗಳಿಂದ ಭಕ್ತಸಾಗರ ಹರಿದು ಬರುತ್ತದೆ. ಜಾತ್ರೆ ಅಂದಾಗ ಬರೀ ಉತ್ತತ್ತಿ-ಬಾಳೆಹಣ್ಣು ಎಸೆದು ಮೋಜು ಮಾಡುವಂತ ಜಾತ್ರೆಯಲ್ಲ. ಈ ಜಾತ್ರೆಯ ವಿಶೇಷತೆಯೇ ವಿಭಿನ್ನ. ಅನೇಕಾನೇಕ ಮನರಂಜನಾ ಕಾರ್ಯಕ್ರಮ, ಆರೋಗ್ಯ ಶಿಬಿರ, ಹೈನುಗಾರಿಕೆ, ಕೃಷಿ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದ ಜೊತೆಗೆ ಜಾನಪದ ಕಲೆಗಳ ಪ್ರದರ್ಶನ ನಾಡಿನಲ್ಲಿ ಸಮಾಜಕ್ಕಾಗಿ, ದೇಶಕ್ಕಾಗಿ, ಸ್ವಾರ್ಥ ರಹಿತ ಸೇವೆಯನ್ನು ಸಲ್ಲಿಸಿದಂತ ನಾಡಿನ ಗಣ್ಯರ ಮಹಾತ್ಮರ ಕುರಿತು ಪುಸ್ತಕ ಬಿಡುಗಡೆ ಕಾರ್ಯಕ್ರಮ, ದಾಸೋಹ ಸೇವೆ ಜನಮನಕ್ಕೆ ಜ್ಞಾನವನ್ನು ಹಂಚುವಂತ ಜಾತ್ರೆಯಂದರೆ ಅದು ಜ. ತೋಂಟದಾರ್ಯ ಮಠದ ಜಾತ್ರೆ.
ಜಾತ್ರೆ ಎಂದರೆ ಜನ ಸೇರಿ ಉತ್ತತ್ತಿ ಬಾಳೆಹಣ್ಣು ಎಸೆದರೆ ಸಾಲದು. ಅದು ಜ್ಞಾನವನ್ನು ಹಂಚಿ ಮೌಢ್ಯತೆಯನ್ನು ತೊಲಗಿಸಿ, ವೈಚಾರಿಕತೆಯನ್ನು ಮೂಡಿಸುವುದೇ ಜಾತ್ರೆಯ ಉದ್ದೇಶವೆಂದು ಜಾತ್ರೆಗಳು ಜನಮಾನಸಕ್ಕೆ ಸಾರಿ ಹೇಳುವದೇ ನಿಜವಾದ ಜಾತ್ರೆ. ಜಾತ್ರೆ ಆಚರಿಸುವ ಉದ್ದೇಶ ಜಾತಿ-ಲಿಂಗ, ವರ್ಣಭೇದವಿಲ್ಲದೆ ಬಡವ, ಶ್ರೀಮಂತ ಎಂದು ಪರಿಗಣಿಸದೆ ಎಲ್ಲ ಧರ್ಮದ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡು ನೋವು-ನಲಿವು ತಮ್ಮೆಲ್ಲಾ ಚಿಂತೆಗಳನ್ನು ಬದಿಗೊತ್ತಿ ಅಜ್ಜನ ಜಾತ್ರೆಯಲ್ಲಿ ಪಾಲ್ಗೊಂಡು ಪಾವನರಾಗುತ್ತಾರೆ.
math
ಜಗದ್ಗುರು ತೋಂಟದಾರ್ಯ ಸಿದ್ಧಲಿಂಗೇಶ್ವರ ಜಾತ್ರೆ ಸಡಗರ ಸಂಭ್ರಮದಿಂದ ಗರಿಗೆದರಿದೆ. ತ್ರಿವಿಧ ದಾಸೋಹಿ ಪೂಜ್ಯ ಶ್ರೀ ಜಗದ್ಗುರು ಲಿಂ. ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ದಿವ್ಯ ಪ್ರಕಾಶದಲ್ಲಿ ಶ್ರೀ ಮನ್ನಿರಂಜನ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಇವರ ಸನ್ನಿಧಿಯಲ್ಲಿ 2024ರ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳು ಜರುಗುತ್ತವೆ.
ಏಪ್ರಿಲ್ 22ರಂದು ಪ್ರಾರಂಭೋತ್ಸವ, ಏ.23ರಂದು ಮಹಾರಥೋತ್ಸವ, ಏ.24ರಂದು ಲಘು ರಥೋತ್ಸವ,
ಏ.25ರಂದು ಮಂಗಲೋತ್ಸವ ಅಷ್ಟೇ ಅಲ್ಲದೆ, ಅಲ್ಲದೆ ಸಾಯಂಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತವೆ. ಈ ಎಲ್ಲ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ರಾಜ್ಯದ ವಿವಿಧ ಭಾಗಗಳಿಂದ ಜನರು ದೊಡ್ಡ ಸಂಖ್ಯೆಯಲ್ಲಿ ಬರುತ್ತಾರೆ. ಹೊರ ರಾಜ್ಯದಲ್ಲಿ ನೆಲೆಸಿರುವ ಬಸವ ಭಕ್ತರು ತೋಂಟದ ಸಿದ್ಧಲಿಂಗನ ಭಕ್ತರು ಇದ್ದಾರೆ. ಉದ್ಯೋಗ ಅರಸಿ ಹೊರ ಊರುಗಳಲ್ಲಿ ಇರುವವರು ಸಹ ವರ್ಷಕ್ಕೊಮ್ಮೆ ನಡೆಯುವ ಜಾತ್ರೆ ಬಂತು ಎಂದರೆ ಏನೋ ಸಡಗರ ಯಾವಾಗ ಜಾತ್ರೆಯಲ್ಲಿ ತೊಡಗಿ ಕರ್ತೃ ಗದ್ದುಗಿ ದರ್ಶನ ಮಾಡಿ ಪಾವನರಾಗುತ್ತೇವೋ ಎಂಬ ತವಕ.
jatra
ಮಾನವತೆಯ ಮಂಗಳದ ವಿಶ್ವ ಸಂಸ್ಕೃತಿಯ ಉಜ್ವಲ ಇತಿಹಾಸದಲ್ಲಿ 12ನೇ ಶತಮಾನದ ಶಿವಾಬ್ದಿ ಸ್ವರೋಣದಯವಾಗಿತ್ತು. ಮಾನವತೆ ಮಂಗಳದ ಮುಂಬೆಳಗಾಗಿ ಮೂಡಿ ಬಂದ ಬಸವಾದಿ ಪ್ರಮಥರನ್ನು ಕನ್ನಡದ ಬಂಗಾರದ ಭಾಂದಳದಲ್ಲಿ ವಚನ ಓಂಕಾರದ ಸುನಾದವನ್ನು ಮೊಳಗಿಸಿದವರು ಪೂಜ್ಯ ಲಿಂ. ಸಿದ್ಧಲಿಂಗ ಶ್ರೀಗಳು.
ಸದ್ಯದ ಪೂಜ್ಯ ಡಾ. ಸಿದ್ಧರಾಮ ಮಹಾಸ್ವಾಮಿಗಳು ಸಹ ಗುರುಗಳ ಮಾರ್ಗದಲ್ಲಿ ನಡೆದು ಶ್ರೀ ಮಠವನ್ನು ಉತ್ತುಂಗಕ್ಕೆ ಏರಿಸಿದ್ದಾರೆ. ಈ ಕಾರಣಕ್ಕಾಗಿಯೇ ಸರಕಾರ ಕೂಡಾ ನಿತ್ಯ ಶಿವಾನುಭವ ಮೂಲಕ 12ನೇ ಶತಮಾನ ಬಸವಾದಿ ಶರಣ ಚಿಂತಕರ ಕುರಿತು ಉಪನ್ಯಾಸ ಏರ್ಪಡಿಸುವುದರ ಮೂಲಕ ಪೂಜ್ಯ ಜಗದ್ಗುರು ಡಾ. ಸಿದ್ಧಲಿಂಗ ಮಹಾಸ್ವಾಮಿಗಳ ಜನ್ಮದಿನವನ್ನು `ಭಾವೈಕ್ಯತೆಯ ದಿನ’ವನ್ನಾಗಿ ಘೋಷಿಸಿ ಪೂಜ್ಯರ ಜಯಂತಿಯನ್ನು ಆಚರಿಸುವಂತಾಯಿತು.
ಕೋಮು ಸೌಹಾರ್ದತೆಗೆ, ವೈಚಾರಿಕತೆಗೆ ಹೆಸರಾದ ಶ್ರೀಮಠವು, ಇಂದಿನ ಆಧುನಿಕ ಯುಗದಲ್ಲಿ ಮಠಗಳು ಕೇವಲ ದೈವಭಕ್ತಿ ಕೇಂದ್ರಗಳಾಗಿದ್ದರೆ ಸಾಲದು, ಜಾತ್ರೆಗಳು ಮೂಢನಂಬಿಕೆಗಳ ಪ್ರತೀಕವಾಗಬಾರದು ಎನ್ನುವ ಸದುದ್ದೇಶದಿಂದ ರಥೋತ್ಸವವನ್ನು ಕಾರಣವಾಗಿಟ್ಟುಕೊಂಡು ಬಸವಾದಿ ಪ್ರಮಥರ, ಶರಣರ, ಸಂತರ ಮಹಾಸಂದೇಶಗಳನ್ನು ಜನಸಾಮಾನ್ಯರಿಗೆ ತಲುಪಿಸಲಾಗುತ್ತಿದೆ. ಜಾತ್ರೆಗಳು ಸಾಂಸ್ಕೃತಿಕ ಸಂದೇಶಗಳನ್ನು ಸಾರುವ ಸಮ್ಮೇಳನವಾಗಬೇಕು. ಈ ದಿಶೆಯಲ್ಲಿ ಗದುಗಿನ ತೋಂಟದ ಸಿದ್ಧಲಿಂಗ ಯತಿಗೆ ರಥೋತ್ಸವವು ಜನ ಸಾಮಾನ್ಯರ ಜಾತ್ರೆಯಾಗಿ ಸಾಂಸ್ಕೃತಿಕ ಚಟುವಟಿಕೆಗಳ ಸಮ್ಮೇಳನವಾಗಿ ನಡೆಯುತ್ತಿರುವುದು ಈ ಭಾಗದ ಜನರಿಗೆ ಹೆಮ್ಮೆಯ ವಿಷಯ.
ಧರ್ಮಗುರು ಬಸವಣ್ಣನವರು ವಚನದಾಶಯದಂತೆ ಧೀರ ಜಂಗಮರಾಗಿ ಬದುಕಿದವರು ಮರಣವನ್ನು ಮಹಾನವಮಿ ಹಬ್ಬವಾಗಿ ಸ್ವೀಕರಿಸಿದರು. ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಹೋರಾಡಿ ಕೇಂದ್ರಕ್ಕೆ ಶಿಫಾರಸ್ಸು ಮಾಡುವಲ್ಲಿ ಯಶಸ್ವಿಯೂ ಆದರೂ ಹೀಗೆ ಜನಮಾನಸಕ್ಕೆ ಜ್ಞಾನ ಮೂಲಕ ಹೊಸ ನಾಂದಿಯನ್ನು ಹಾಡಿದವರು ಲಿಂ. ಡಾ. ಸಿದ್ಧಲಿಂಗ ಮಹಾಸ್ವಾಮಿಗಳು ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಾವೆಲ್ಲ ಜೀವನದಲ್ಲಿ ನಡೆದು ಕರಿಬಸಯ್ಯಜ್ಜನ ಕೃಪೆಗೆ ಹಾಗೂ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಗುರುಕೃಪೆಗೆ ಪಾತ್ರರಾಗೋಣ.
– ಚಿದಾನಂದಯ್ಯ ಶ್ರೀಶಾಂತಯ್ಯನಮಠ.
ಗದಗ.

Spread the love
Advertisement

LEAVE A REPLY

Please enter your comment!
Please enter your name here